ಹಂಪಿಯಲ್ಲಿ ಅಕ್ಷಯ್ 'ರೌಡಿ ರಾಥೋಡ್' ಪುಂಡಾಟಿಕೆ

Akshay Kumar
ಜಗತ್ಪ್ರಸಿದ್ಧ ಐತಿಹಾಸಿಕ ಸ್ಥಳ ಹಂಪಿ ಈಗ ಬಾಲಿವುಡ್ ಕರ್ಮಕಾಂಡಕ್ಕೆ ಸಾಕ್ಷಿಯಾಗಿದೆ ಎಂಬ ಸುದ್ದಿ ಬಂದಿದೆ. ಅಲ್ಲೀಗ ನಟ ಅಕ್ಷಯ್ ಕುಮಾರ್ ನಟನೆಯ 'ರೌಡಿ ರಾಥೋಡ್' ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣವೇನೋ ಸರಿ, ಆದರೆ ಇದ್ದ ಕಾನೂನು, ಸ್ಥಳೀಯ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಅನಾಹುತ ಮಾಡಲಾಗುತ್ತಿದೆ ಎಂಬ ದೂರುಗಳು ಅಲ್ಲಿಂದ ಕೇಳಿಬರುತ್ತಿದೆ.

ಕನ್ನಡದಲ್ಲಿ ಸುದೀಪ್ ಅಭಿನಯಿಸಿದ್ದ ವೀರ ಮದಕರಿ ಚಿತ್ರ ತೆಲುಗಿನ 'ವಿಕ್ರಮಾರ್ಕುಡು' ರೀಮೇಕ್. ಅದೇ ಚಿತ್ರವೀಗ ಅಕ್ಷಯ್ ಕುಮಾರ್ ನಟನೆಯಲ್ಲಿ ಬಾಲಿವುಡ್ ನಲ್ಲಿ ಚಿತ್ರೀಕರಣವಾಗುತ್ತಿದೆ. ಅದಕ್ಕೆ 'ರೌಡಿ ರಾಥೋಡ್' ಎಂದು ನಾಮಕರಣ ಮಾಡಲಾಗಿದೆ. ಆ ಚಿತ್ರದ ಶೂಟಿಂಗ್ ಸಲುವಾಗಿ ಚಿತ್ರತಂಡವೀಗ ಹಂಪಿಯಲ್ಲಿ ಬೀಡುಬಿಟ್ಟಿದೆ. ಹಾಡೊಂದರ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.

ಆದರೆ ಸಮಸ್ಯೆ ಆಗಿದ್ದು ಚಿತ್ರತಂಡದ ವಾಹನ ಹಾಗೂ ಚಿತ್ರೀಕರಣದ ವೇಳೆ. ಪ್ರವಾಸಿಗರಿಗೆ ಸಮಸ್ಯೆಯಾಗುವಂತೆ ವಾಹನ ತಂದು ಒಳಗೆ ನಿಲ್ಲಿಸಿಕೊಂಡಿದ್ದಲ್ಲದೇ ಅಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಮಾಡಿದ್ದಾರೆ. ಚಿತ್ರೀಕರಣ ನಡೆಯುತ್ತಿರುವಷ್ಟೂ ಹೊತ್ತು ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದು ದೇಶಿಯ ಹಾಗೂ ವಿದೇಶಿಯ ಎಲ್ಲಾ ಪ್ರವಾಸಿಗರನ್ನೂ ಕೆರಳಿಸಿದೆ.

ಅಷ್ಟೇ ಅಲ್ಲದೇ ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಅದಕ್ಕಾಗಿ ದೊಡ್ಡ ರಂಪಾಟವೇ ನಡೆದಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಬಹಳಷ್ಟು ದೂರುಗಳು ಹೋಗಿದ್ದು, ತಕ್ಷಣ ಸ್ಥಳೀಯರ ಹಾಗೂ ಪ್ರವಾಸಿಗರ ದೂರಿಗೆ ಸ್ಪಂದಿಸಿ ಇಲಾಖೆ ಚಿತ್ರತಂಡದ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಯುವುದೆಂದು ಆಶಿಸಲಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Bollywood Actor Akshay Kumar's upcoming movie Rowdy Rathore Shooting is going on at Hampi, Karnataka. Movie team has created lots of problems to Tourists and Locals. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X