ಅಮಿತಾಬ್ ಬಚ್ಚನ್ ಗಾಗಿ ಮಾಧುರಿಗೆ ಗೇಟ್ ಪಾಸ್

ಈ ಮೊದಲು ಇದನ್ನು ಅಮಿತಾಬ್ ಅವರೇ ನಡೆಸಿಕೊಡಬೇಕಾಗಿತ್ತು. ಆದರೆ ಆ ವೇಳೆ ಕೈಗೆ ಸಿಗದಷ್ಟು ಬ್ಯುಸಿಯಾಗಿದ್ದರು ಅಮಿತಾಬ್. ಹಾಗಾಗಿ ಮೊದಲ ಆಯ್ಕೆ ಅಮಿತಾಬ್ ಬಿಟ್ಟು ಎರಡನೇ ಆಯ್ಕೆ ಮಾಧುರಿಗೆ ಮಣೆ ಹಾಕಿತ್ತು ಲೈಫ್ ಓಕೆ ವಾಹಿನಿ. ಮಾಧುರಿ ಚೆನ್ನಾಗಿ ನಡೆಸಿಕೊಟ್ಟರು ಕೂಡ. ಈಗ ಅಮಿತಾಬ್ ನಡೆಸಿಕೊಡಲು ಒಪ್ಪಿದ್ದಾರೆ. ಹಾಗಾಗಿ ಇನ್ನು ಮಾಧುರಿ ಜಾಗಕ್ಕೆ ಅಮಿತಾಬ್ ಬರಲಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿಯನ್ನು ಜಗತ್ತಿನಾದ್ಯಂತ ಊಹಿಸಲಾಗದಷ್ಟು ಜನಪ್ರಿಯಗೊಳಿಸಿದ್ದ ಅಮಿತಾಬ್ ಮತ್ತೆ ಅದರ 6 ನೇ ಆವೃತ್ತಿಗೆ ಕೈಜೋಡಿಸಿದ್ದಾರೆ. ಜೊತೆಗೆ ಲೈಫ್ ಓಕೆಯ ಸೂತ್ರಧಾರ ಕೂಡ ಅವರ ಕೈಸೇರಿದೆ. ಒಟ್ಟಿನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಅಮಿತಾಬ್ ಮೋಡಿ ಮತ್ತೆ ಲಭಿಸಲಿದೆ. (ಏಜೆನ್ಸೀಸ್)
English summary
Superstar Amitabh Bachchan is all set to replace Madhuri Dixit as the Sutradhar of Life Ok channel.


Click it and Unblock the Notifications