ವೈದ್ಯರುಗಳು ನಟಿ ವಿದ್ಯಾ ಬಾಲನ್ ಹಿಂದೆಬಿದ್ದಿದ್ದಾರೆ

ಹೌದು, ಹಾಗೇ ಮಾಡಬೇಕಾದ ಕಾಲ ಬಂದಿದೆ. ಕಾರಣ ವಿದ್ಯಾ ಈಗತಾನೇ ಮುಂಬೈ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಪಕ್ಕಾ ವೃತ್ತಿಪರತೆ ಮೆರೆಯುತ್ತಿರುವ ಆಕೆ ಸೀದಾ ಶೂಟಿಂಗ ಗೆ ಬಂದಿದ್ದಾಳೆ. ಇನ್ನೂ ಆಕೆಗೆ ವಿಶ್ರಾಂತಿ ಅಗತ್ಯವಿದೆ ಎಂಬುದು ವೈದ್ಯರುಗಳ ಅಂಬೋಣ. ಆದರೆ ಶೂಟಿಂಗ್ ಸಾಗಲೇಬೇಕಲ್ಲ! ಎಲ್ಲವನ್ನೂ ಬಲ್ಲ ನಿರ್ಮಾಪಕ ತನುಜ್ ಗಾರ್ಗ್, ವಿದ್ಯಾಗಾಗಿ ಸೆಟ್ ನಲ್ಲಿ ವೈದ್ಯರನ್ನು ನೇಮಿಸಿದ್ದಾರೆ.
ಹಿಮೋಗ್ಲೋಬಿನ್ ಮಟ್ಟ ಕುಸಿದಿದೆಯಂತೆ. ಬೆನ್ನುನೋವು ಪೂರ್ತಿ ವಾಸಿಯಾಗಿಲ್ಲವಂತೆ. ಹಾಗಾಗಿ ವೈದ್ಯರು ಅವರ ಕೆಲಸ ಮಾಡುತ್ತಿದ್ದಾರೆ. ಕೈ ಹಿಡಿಯದೇ ಪಲ್ಸ್ ನೋಡಲಾಗುತ್ತದೆಯೇ? ಕಣ್ಣು ನೋಡದೇ ಪರೀಕ್ಷಿಸಲಾಗುತ್ತದೆಯೇ? ಎಲ್ಲಾ ಅನಾರೋಗ್ಯದ ಮಹಿಮೆ. ವೈದ್ಯರಿಗೆ ವಿದ್ಯಾಳನ್ನು ನೋಡುವ ಭಾಗ್ಯ. ವಿದ್ಯಾಳಿಗೆ ಸೆಕ್ಸ್ ಬಾಂಬ್ ಸಿಲ್ಕ್ ಸ್ಮಿತಾ ಪಾತ್ರ ಮಾಡುವ ಸುಯೋಗ!
ಇನ್ನು ನವೆಂಬರ್ ಮಧ್ಯಭಾಗದಿಂದ ಪ್ರಾರಂಭವಾಗಲಿದೆ ಪ್ರಮೋಶನ್ ಗಾಗಿ ಸಾಕಷ್ಟು ಸಿಟಿ ಸುತ್ತಾಟ. ಆಗ ವಿದ್ಯಾ ಕೇರ್ ಮಾಡಲು ಸ್ಥಳೀಯ ವೈದ್ಯರು ಜೊತೆಯಾಗಲಿದ್ದಾರಂತೆ. ಬಾಲಿವುಡ್ ಚಿತ್ರದ ಪ್ರಮೋಶನ್ ನಡೆಯುವ ಕಡೆಯಲ್ಲೆಲ್ಲಾ ಇರುವ ವೈದ್ಯರುಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರಂತೆ. ಪಾಪ! ವೈದ್ಯವಿದ್ಯಾರ್ಥಿಗಳು ಲೇಟಾಗಿ ಹುಟ್ಟಿಸಿದ್ದಕ್ಕೆ ಅವರ ಪೋಷಕರಿಗೆ ಶಾಪ ಹಾಕುತ್ತಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್...


Click it and Unblock the Notifications











