ಖಳನಟ ಪ್ರೇಮ್ ಛೋಪ್ರಾ ಮೇಲೆ ಎಫ್ ಐಆರ್

ಬಾಲಿವುಡ್ ನಟ್ ಪ್ರೇಮ್ ಛೋಪ್ರಾ ಅವರ ಮೇಲೆ ವಂಚನೆ ಆರೋಪ ಹೊರೆಸಲಾಗಿದ್ದು, ತನಿಖೆ ಜಾರಿಯಲ್ಲಿದೆ.
ಗೋಪಾಲ್ ದಾಸ್ ಮೆಘಾನಿ ಎಂಬುವರ ದೂರಿನ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಲದ ನ್ಯಾ. ರಾಜೇಂದ್ರ ಸೈನಿ ಅವರು ಸುಭಾಶ್ ನಗರ ಪೊಲೀಸರಿಗೆ ನಟ ಪ್ರೇಮ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಸಲಿಂ ಪ್ರೊಡಕ್ಷನ್ ಸಂಸ್ಥೆ ಮೂಲಕ ಬಾಲಿವುಡ್ ಗೆ ಎಂಟ್ರಿ ಸುಲಭ ಎಂದು ಜಾಹೀರಾತು ನೀಡಿ ಎಲ್ಲರನ್ನು ವಂಚಿಸಲಾಗುತ್ತಿದೆ. ಪ್ರೇಮ್ ಛೋಪ್ರಾ, ರಾಕೇಶ್ ಪಾಂಡೆ, ಸುಜಾತಾ ಬಕ್ಷಿ, ರಾಧಾ ಕೇಶ್ವಾನಿ ಅವರ ಮೇಲೆ ಕ್ರಮ ಜರುಗಿಸಿ ಎಂದು ಗೋಪಾಲ್ ದಾಸ್ ದೂರು ನೀಡಿದ್ದಾರೆ.
ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರು ಮೆದು ದನಿಯ ವಿಲನ್ ಪ್ರೇಮ್ ಛೋಪ್ರಾ, ಸುಮಾರು ಮೂರು ದಶಕಗಳ ಕಾಲ ವಿಲನ್ ಆಗಿ ಹಿಂದಿ ಚಿತ್ರರಂಗದಲ್ಲಿ ವಿಜೃಂಭಿಸಿದ್ದಾರೆ. ಇತ್ತೀಚೆಗೆ ಕಾಮಿಡಿ ಪಾತ್ರಕ್ಕೆ ತಿರುಗಿದ 76 ವರ್ಷದ ಪ್ರೇಮ್ ಅವರು ಕೊನೆಯದಾಗಿ ಪಂಜಾಬಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
English summary
The Jaipur police was directed by a local court to register an FIR against Bollywood actor Prem Chopra in a cheating case and submit investigation report on it.


Click it and Unblock the Notifications