ಸಲ್ಮಾನ್-ಅಸಿನ್ ಹಸಿ ಹಸಿ ಮುತ್ತಿನ ಕಥೆ....

By Srinath

Salman Khan - Asin
ಯಾಕಪ್ಪಾ ಇವಯ್ಯ ಸಲ್ಲು ನಮ್ಮ ದಕ್ಷಿಣ ಭಾರತದ ಮುದ್ದಿನ ಚೆಲುವೆ ಅಸಿನ್ ಜತೆ ತುಟಿ ತುಟಿ ಚುಂಬನಕ್ಕೆ ಒಲ್ಲೆ ಎಂದಿದ್ದಾನೆ ಎಂದು ಅಭಿಮಾನಿಗಳು ಶಾನೆ ಬೇಜಾರು ಮಾಡಿಕೊಂಡಿದ್ದರು. ಆದರೆ ಲಿಪ್ ಲಾಕ್ ಸೀನ್ ರೆಡಿ ಆಗಿದೆ. ರೆಡಿ ಎಂಬ ತೆಲುಗು ಚಿತ್ರದ ರಿಮೇಕ್ ನಲ್ಲಿ ಸಲ್ಲು ಕೊನೆಗೂ ತುಟಿಕ್ ಪಿಟಿಕ್ ಎನ್ನದೆ ಅಸಿನ್ ತುಟಿ ಮೇಲೆಯೇ ಚುಂಬನ ಮುದ್ರೆ ಒತ್ತಿದ್ದಾನೆ.

ಅಂದಹಾಗೆ ಅನೇಕ ವರ್ಷಗಳ ನಂತರ ಸಲ್ಲು ಈ ರೀತಿ ತನ್ನ ನಾಯಕಿಗೆ ಮುತ್ತಿಟ್ಟಿದ್ದಾನೆ. ಬೇಡ ಬೇಡ ಎನ್ನುತ್ತಿದ್ದವನು ಯಾವಾಗ ಅಸಿನ್ ಗೆ ಮುತ್ತಿಟ್ಟ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಸಿನ್ ಸಹ ಇದನ್ನೇ ಕೇಳಿದ್ದಾಳೆ. ಸಲ್ಲು ಮಿಯಾ ನೀನ್ ಯಾವಾಗ ನನ್ಗೆ ಮುತ್ತು ಕೊಟ್ಟೆ!? ಎಂದು ಅಮಾಯಕಳಾಗಿ ಕೇಳಿದ್ದಾಳೆ.

ಏನಾಯಿತಂದರೆ... ಸಲ್ಲುನ ಈ ಹಿಂದಿನ ಸೂಪರ್ ಡೂಪರ್ ಚಿತ್ರ 'ಹಮ್ ದಿಲ್ ದೇ ಚುಕೆ ಸನಂ'ನಲ್ಲಿ ತನ್ನ ಅಂದಕಾಲತ್ತಿಲ್ ಆರಾಧ್ಯ ದೇವತೆ ಐಶ್ ಬೇಬಿಗೆ ಅಚಾನಕ್ಕಾಗಿ ಹೂಮುತ್ತಿಡುತ್ತಾನೆ. ಅವಳು ತಿರುಗಿ ನೋಡುವ ವೇಳೆಗೆ ಮುತ್ತಿನಂತಹ ಕಾರ್ಯ ಮುಗಿದುಹೋಗಿರುತ್ತದೆ. ಇದು ಜ್ಞಾಪಕಕ್ಕೆ ಬಂದಿದ್ದೇ ತಡ ಸಲ್ಮಾನ್ ಖಾನ್ ಅಸಿನ್ ಗೆ ಲಿಪ್ ಲಾಕ್ ಮಾಡ್ಬಿಟ್ಟನಂತೆ. ಅಂದರೆ 'ಹಮ್ ದಿಲ್ ದೇ ಚುಕೆ ಸನಂ'ನ ಲಿಪ್ ಲಾಕ್ ದೃಶ್ಯ ರೆಡಿ ಚಿತ್ರದಲ್ಲೂ ರಿಪೀಟ್ ಷೋ ಆಗಿದೆಯಂತೆ. ತಡವೇಕೆ, ಜೂನ್ 3ರ ವೇಳೆಗೆ 'ರೆಡಿ' ನೋಡಲು ನೀವೂ ರೆಡಿಯಾಗಿ.

ಚಿತ್ರದಲ್ಲಿ ಸಲ್ಮಾನ್ ಮಿಸ್ಟರ್ ಹ್ಯಾಂಡ್ ಸಂ ಆಗಿ ವಿಜೃಂಭಿಸಿದ್ದಾರೆ. ಅಸಿನ್ ಹಿಂದೆಂದಿಗಿಂತ ತುಸು ಹೆಚ್ಚೇ ಎನ್ನುವಷ್ಟು ಸರಳ ಸೌಂದರ್ಯವತಿಯಾಗಿ ಮಿಂಚುತ್ತಿದ್ದಾಳಂತೆ. ಚಿತ್ರದಲ್ಲಿ ಹಾಡು, ನೃತ್ಯ, ರೊಮಾನ್ಸ್, ಆಕ್ಷನ್, ಮೋಜು ಮಸ್ತಿ ಭರಪೂರವಾಗಿದೆಯಂತೆ. ಚಿತ್ರದಲ್ಲಿ ಸಲ್ಲುನ ಈ ಡೈಲಾಗ್ ಕೇಳಿಸಿಕೊಳ್ಳಿ : ಜಿಂದಗಿ ಮೆ ತೀನ್ ಚೀಸ್ ಕಭಿ ಅಂಡರ್ ಎಸ್ಟಿಮೇಟ್ ನಹಿ ಕರ್ನಾ - ನಾನು, ನನ್ನದು, ನನಗಾಗಿ.

More from Filmibeat

English summary
Many might be wondering why Salman Khan decided to kiss his co-star Asin Thottumkal in his much-hyped film, Ready, after staying away from it all these years. Well, we hear that the kiss is inspired by a scene in his hit film Hum Dil De Chuke Sanam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X