ಕತ್ರಿನಾ, ಪ್ರಿಯಾಂಕಾ ಚೋಪ್ರಾ ಮನೆ ಮೇಲೆ ಐಟಿ ದಾಳಿ
ಬಾಲಿವುಡ್ ಸಿನಿಮಾ ತಾರೆಗಳಾದ ಕತ್ರಿನಾ ಕೈಫ್ ಹಾಗೂ ಪ್ರಿಯಾಂಕಾ ಚೋಪ್ರಾ ಮನೆಗಳ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರಿಬ್ಬರೂ ತೆರಿಗೆ ತಪ್ಪಿಸಿರಬಹುದು ಎಂಬ ಗುಮಾನಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ (ಜ.24) ಬೆಳಗ್ಗೆ ಹಠಾತ್ ದಾಳಿಗೆ ಮುಂದಾದರು.
ಇಂದು ಮುಂಜಾನೆ 8ಗಂಟೆಯಿಂದಲೇ ಐಟಿ ದಾಳಿ ನಡೆದಿದ್ದು, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಮನೆಗಳಲ್ಲಿ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬಹುಶಃ ಇಂದು ಸಂಜೆವರೆಗೂ ದಾಖಲೆಗಳ ಪರಿಶೀಲನೆ ಮುಂದುವರಿಯಬಹುದು. ಉಳಿದ ತಾರೆಗಳಿಗೆ ಹೋಲಿಸಿದರೆ ಬಾಲಿವುಡ್ ಚಿತ್ರೋದ್ಯಮದಲ್ಲಿ ಇವರಿಬ್ಬರೂ ಆದಾಯ ಕಣ್ಣುಕುಕ್ಕುವಂತಿರುವುದೇ ಐಟಿ ದಾಳಿಗೆ ಕಾರಣವಾಗಿದೆ.
ಚಿತ್ರವೊಂದಕ್ಕೆ ಪಡೆಯುವ ಸಂಭಾವನೆಗಿಂತ ಇವರು ಒಪ್ಪಿಕೊಳ್ಳುವ ರಸಸಂಜೆ , ಡಾನ್ಸ್ ಕಾರ್ಯಕ್ರಮಗಳಿಂದಲೇ ಅತ್ಯಧಿಕ ಆದಾಯ ಗಳಿಸುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಇವರ ಮೇಲೆ ಐಟಿ ಅಧಿಕಾರಿಗಳ ಕಣ್ಣು ಬಿದ್ದಿದೆ. ಇವರಿಬ್ಬರೂ ತೆರಿಗೆ ವಂಚಿಸಿದ್ದಾರೋ? ಇಲ್ಲವೋ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಲೇ ಬೇಕು. [ಪ್ರಿಯಾಂಕಾ ಚೋಪ್ರಾ]


Click it and Unblock the Notifications











