ಕರೀನಾ ಕಪೂರ್ ಸೈಫ್ ಮದುವೆಗೆ ಸೂತಕದ ಛಾಯೆ
ಇನ್ನೇನು ಕರೀನಾ ಕಪೂರ್ ಹಾಗೂ ಚೋಟೆ ನವಾಬ್ ಸೈಫ್ ಆಲಿ ಖಾನ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಸೈಫ್ ಅವರ ತಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಅವರ ಅಕಾಲ ಮರಣ ಇವರ ಮದುವೆಯನ್ನು ಮುಂದೂಡಿದೆ.
ಟೈಗರ್ ಪಟೌಡಿ ಪ್ಯಾಲೇಸ್‌ನಲ್ಲಿ ಇವರೀರ್ವರ ಮದುವೆ ಸಮಾರಂಭ ವೈಭವವಾಗಿ ನಡೆಸಲು ನಿರ್ಧರಿಸಲಾಗಿತ್ತು. ಫೆಬ್ರವರಿಯಲ್ಲಿ ಇವರ ಮದುವೆ ನೆರವೇರುವುದರಲ್ಲಿತ್ತು. ಪಟೌಡಿ ಆರೋಗ್ಯ ಕ್ಷೀಣಿಸಿದ್ದ ಕಾರಣ ಶಾದಿ ಸಮಾರಂಭವನ್ನು ಫೆಬ್ರವರಿಗೆ ಮುಂದೂಡಿತ್ತು ಈ ಯುವ ಜೋಡಿ.
ಈಗ ಪಟೌಡಿ ಅವರ ನಿರ್ಗಮನದಿಂದ ಇವರ ಮದುವೆ ಅನಿಶ್ಚಿತ ಸಮಯಕ್ಕೆ ಮುಂದೂಡಲ್ಪಟ್ಟಿದೆ. ಸೈಫ್ ಕುಟುಂಬ ಮೂಲಗಳ ಪ್ರಕಾರ, ಇನ್ನೂ ಒಂದು ವರ್ಷ ಸೈಫ್ ಮನೆಯಲ್ಲಿ ಯಾವುದೇ ಶುಭ ಸಮಾರಂಭವಿಲ್ಲವಂತೆ.
ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರೀಕರಣದಲ್ಲಿದ್ದ ಸೈಫ್ ಎದ್ದೆನೋ ಬಿದ್ದೆನೋ ಎಂದು ಸರ್ ಗಂಗಾರಾಮ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಂದವರೆ ಅಪ್ಪನ ಮುಖ ಕಂಡು ಕುಸಿದು ಬಿದ್ದಿದ್ದಾರೆ. ಕರೀನಾ ಕೂಡ ಚಿತ್ರೀಕರಣದಲ್ಲಿದ್ದರಂತೆ. ಸುದ್ದಿ ತಿಳಿದ ಕೂಡಲೆ ಅವರು ಓಡಿಬಂದರಂತೆ. ಸೈಫ್ ಮಾಜಿ ಪತ್ನಿ ಅಮ್ರಿತಾ ಸಿಂಗ್ ತನ್ನ ಮಕ್ಕಳೊಂದಿಗೆ ಆಸ್ಪತ್ರೆಗೆ ಬಂದು ಮಾವನ ಮುಖವನ್ನು ಕೊನೆಯದಾಗಿ ಒಮ್ಮೆ ನೋಡಿಕೊಂಡು ಹೋದರಂತೆ. (ಏಜೆನ್ಸೀಸ್)


Click it and Unblock the Notifications











