ಮಲ್ಲಿಕಾ ಶೆರಾವತ್ ಗೆ ಮೂವತ್ತು ವರ್ಷ: ನಂಬಿದ್ರೆ ನಂಬಿ
ಹೇಳಿ ಕೇಳಿ ಹುಡ್ಗೀರ್ ವಯಸ್ಸೇ ಕೇಳಬಾರ್ದು. ಅದರಲ್ಲೂ ನಟಿ ವಯಸ್ಸು ಕೇಳ್ಲೇಬಾರ್ದು. ಅದು ಗೊತ್ತಿರೋ ಸತ್ಯ. ಹಾಗಾಗಿ ಮಲ್ಲಿಕಾ ವಿಷ್ಯದಲ್ಲೂ ಹಾಗೇ ಇದ್ಬಿಡಿ. ರೀಮಾ ಲಾಂಬಾ ಎಂಬ ಮೂಲ ಹೆಸರಿನ ಹರಿಯಾಣಾದ ಈ ಹುಡುಗಿ ಸೆಕ್ಸೀ ಶೆರಾವತ್ ಅಂತ್ಲೇ ಕರೆಸಿಕೊಳ್ಳೋದು. ಹೇಳೋದು ಈಗ ಮೂವತ್ತೇ ವರ್ಷ. ಜನ್ಮ ದಿನಾಂಕ 24-10-1976, ಏಣಿಸಿಕೊಳ್ಳಿ!
ಸಂಖ್ಯಾ ಶಾಸ್ತ್ರದ ಪ್ರಕಾರ ಈಕೆಯ ಜನ್ಮದಿನದ ಒಟ್ಟಂಕಿ 6. ಈ 6, ಕಾಮದೇವನನ್ನು ಪ್ರತಿನಿಧಿಸುತ್ತದಂತೆ. ಅದೇನೋ ಗೊತ್ತಿಲ್ಲ ಅನ್ನೋ ಹಾಗೇ ಇಲ್ಲ. ಮಲ್ಲಿಕಾ ನೋಡಿದ್ಮೇಲೆ ಅದು ಖರೆ ಅನ್ನಲೇಬೇಕು. ಈಕೆ ತೆರೆಯ ಮೇಲೆ ಬಂದ್ರೆ ಪ್ರಳಯ ಗ್ಯಾರಂಟಿ. ಈಕೆಯ 'ಹಿಸ್' ಚಿತ್ರ ಭುಸ್ ಆದ್ಮೇಲೆ ಹಾಲಿವುಡ್ ಗೆ ಹಾರಿದರೂ ಅಲ್ಲೂ ಹೇಳ್ಕೊಳ್ಳೋ ಯಶಸ್ಸೇನೂ ಸಿಗಲಿಲ್ಲ.
ಈಗ ದಕ್ಷಿಣದ ಕಡೆ ಮುಖ ಮಾಡಿರುವ ಈಕೆ 'ತಮಿಳು ಚಿತ್ರದ ಐಟಂ ಸಾಂಗ್' ಒಂದರಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆಯಂತೆ. ಆ ಚಿತ್ರ ಬಿಡುಗಡೆಯಾದ ದಿನ ವಯಸ್ಸಿಗೆ ಬಂದಿರೋ ಗಂಡುಮಕ್ಕಳನ್ನೆಲ್ಲಾ ಮನೇಲಿ ಹುಡುಕಲೇಬೇಡಿ. ಥಿಯೇಟರ್ ನಲ್ಲಿ ಇರ್ತಾರೆ, ಬೇಕಾದ್ರೆ ನೋಡಿ! ಯಾಕೆ ಸುಮ್ನೇ ಮಲ್ಲಿಕಾ ಪುರಾಣ, ಮೊದ್ಲು ವಿಶ್ ಮಾಡ್ಬಿಡೋಣ. ಹ್ಯಾಪಿ ಬರ್ತ್ ಡೇ ಟು ಮಲ್ಲಿಕಾ...


Click it and Unblock the Notifications












