For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ಐಶ್ವರ್ಯ ರೈ ದಾರಿಯಲ್ಲಿ ಪ್ರೀತಿ ಜಿಂಟಾ!

  By Rajendra
  |

  ಐಶ್ವರ್ಯ ರೈ ಗರ್ಭಿಣಿ ಎಂಬ ಸಂಗತಿ ಬಹಿರಂಗವಾಗುತ್ತಿದ್ದಂತೆ ಆಕೆಯ ಮುಂದಿನ ಚಿತ್ರಗಳ ಸ್ಥಿತಿಗತಿಗಳು ಡೋಲಾಯಮಾನವಾಗಿದೆ. ಈ ಹಿಂದೆ ರಾಜ್‌ಕುಮಾರ್ ಸಂತೋಷಿ ಅವರ 'ಲೇಡೀಸ್ ಅಂಡ್ ಜಂಟ್ಲ್‌ಮೆನ್' ಚಿತ್ರಕ್ಕೆ ಸಹಿಹಾಕಿದ್ದರು. ಈ ಚಿತ್ರದ ನಾಯಕ ನಟ ಅಭಿಷೇಕ್ ಬಚ್ಚನ್.

  ಈಗ ಈ ಚಿತ್ರದಲ್ಲಿ ಐಶು ಅಭಿನಯಿಸುವುದು ಅನುಮಾನಾಸ್ಪದವಾಗಿದೆ. ಐಶ್ವರ್ಯ ರೈ ಪಾತ್ರವನ್ನು ಗುಳಿ ಕೆನ್ನೆ ಸುಂದರಿ ಪ್ರೀತಿ ಜಿಂಟಾ ಮಾಡಲು ಮುಂದಾಗಿದ್ದಾರೆ. ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತಂತೆ. ಆದರೆ ಅಭಿಗೆ ಪ್ರೀತಿ ತುಂಬಾ ಆಪ್ತವಾಗಿರುವ ಕಾರಣ, ಆಕೆಯನ್ನೇ ಫೈನಲೈಜ್ ಮಾಡಲಾಗಿದೆ ಎನ್ನಲಾಗಿದೆ.

  ತಮ್ಮ ಚಿತ್ರದಲ್ಲಿ ಐಶ್ವರ್ಯ ರೈ ಅಭಿನಯಸದೆ ಇರುವ ಬಗ್ಗೆ ನನಗೇನು ಬೇಸರವಿಲ್ಲ. ಉಳಿದೆಲ್ಲ ವಿಚಾರಗಳಿಗಿಂತ ತಾಯ್ತನದ ಆನಂದ ಮುಖ್ಯ. ಆಕೆಗೂ ಮತ್ತು ಅಭಿಷೇಕ್ ಬಚ್ಚನ್ ದಂಪತಿಗಳಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಸಂತೋಷ್ ಕುಮಾರ್ . (ಏಜೆನ್ಸೀಸ್)

  English summary
  The pregnancy news of Aishwarya Rai Bachchan has created confusion on her forthcoming films, and one of those is Ladies and Gentlemen, which has Abhishek Bachchan in the lead role. Now, we hear that Preity Zinta would replace Aishwarya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X