For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆ ಮುನ್ನವೇ 50 ಕೋಟಿ ಬಾಚಿದ ಸಲ್ಲೂ ಚಿತ್ರ

  By Mahesh
  |

  ಚುಲ್ ಬುಲ್ ಪಾಂಡೆ ಅಲಿಯಾಸ್ ಸಲ್ಮಾನ್ ಖಾನ್ ತುಂಬಾ ಲಕ್ಕಿ ಕಣ್ರಿ. ದಬ್ಬಾಂಗ್ ಚಿತ್ರ ಬಾಕ್ಸಾಫೀಸ್ ನಲ್ಲಿ ಸಿಕ್ಕಾಪಟ್ಟೆ ಗಳಿಕೆ ಮಾಡಿದ್ದೇ ಲಕ್ ಎಂದು ಎಲ್ಲರೂ ಆಡಿಕೊಳ್ಳುವ ಹೊತ್ತಿಗೆ ದಬ್ಬಾಂಗ್ 2 ರಿಲೀಸ್ ಮಾಡಲು ಸಲ್ಲೂ ರೆಡಿ ಆಗಿದ್ದಾನೆ.

  ಬಾಲಿವುಡ್ ನ ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಇನ್ನೂ ಬಿಡುಗಡೆಯಾಗದ ಸಲ್ಮಾನ್ ಕುಟುಂಬದ ಬ್ಯಾನರ್ ನ ಚಿತ್ರ ದಬ್ಬಾಂಗ್ 2 ಆಗಲೇ ಮಾರಾಟವಾಗಿದೆ.

  ಸುಮಾರು 48-50 ಕೋಟಿ ರು ಕೊಟ್ಟು ಸ್ಟಾರ್ ನೆಟ್ವರ್ಕ್ ಈ ಚಿತ್ರದ ಹಕ್ಕುಗಳನ್ನು 11 ವರ್ಷಕ್ಕೆ ಖರೀದಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು 10 ಕೋಟಿ ರು ದರದಂತೆ ಟೀ ಸೀರೀಸ್ ಸಂಸ್ಥೆ ಮಾರಾಟವಾಗಿದೆ.

  ಕ್ಯೂಬಾದಲ್ಲಿ ಎಕ್ ಥ ಟೈಗರ್ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಸಲ್ಮಾನ್ ಖಾನ್ ಪ್ರಕಾರ, ಮುಂದಿನ ವಾರದಲ್ಲಿ ದಬ್ಬಾಂಗ್ 2 ಚಿತ್ರೀಕರಣ ಮುಂಬೈನಲ್ಲಿ ಆರಂಭವಾಗಲಿದೆಯಂತೆ.

  ದಬ್ಬಾಂಗ್ 2ರಲ್ಲಿ ಮುಖ್ಯ ವಿಲನ್ ಆಗಿ ಪ್ರಕಾಶ್ ರೈ ನಟಿಸುವ ಸಾಧ್ಯತೆಯಿದೆ. ಈ ಹಿಂದೆ ಹೃತಿಕ್ ರೋಷನ್ ಅವರ ಕ್ರಿಶ್ ಹಾಗೂ ಶಾರುಖ್ ಖಾನ್ ಅವರ ಡಾನ್ 2 ಚಿತ್ರಗಳು ಸೋನಿ ಸಂಸ್ಥೆ ತಲಾ 37 ಕೋಟಿ ರು.ಗಳಿಗೆ ಬಿಕರಿಯಾಗಿತ್ತು.

  ಅಮೀರ್ ಖಾನ್ ಅವರ ತಲಾಶ್ ಹಾಗೂ ಕರಣ್ ಜೋಹರ್ ಅವರ ಅಗ್ನಿಪಥ್ ಚಿತ್ರ ಕೂಡಾ 40 ಕೋಟಿ ರು ಗಳಿಗೆ ಮಾರಾಟವಾಗಿ ದಾಖಲೆ ಬರೆದಿತ್ತು.ಈಗ ಸಲ್ಮಾನ್ ಖಾನ್ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ.

  English summary
  Chulbul Pandey aka Salman Khan's much-awaited Dabangg 2's satellite rights have been snapped up for a record of Rs 48-50 crore by Star Network for 11 years, a trade source (close to the deal) informed a leading daily

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X