ಶಾರುಖ್ ಖಾನ್ ಜೊತೆ ಸಚಿನ್ ಡಾನ್ಸ್ ರಾಜ ಡಾನ್ಸ್!

By Rajendra

ಭಾರತ ಕ್ರಿಕೆಟನ್‌ನ ಜೀವನ ದಂತಕಥೆ ಸಚಿನ್ ತೆಂಡೂಲ್ಕರ್ ಕಡೆಗೂ ಮೈಚಳಿ ಬಿಟ್ಟು ಕುಣಿದಿದ್ದಾರೆ. ಅವರು ಡಾನ್ಸ್ ರಾಜ ಡಾನ್ಸ್ ಎಂದು ಕುಣಿಯುವಂತೆ ಮಾಡಿದ ಖ್ಯಾತಿ ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ಸಲ್ಲುತ್ತದೆ. ಇದಕ್ಕೆಲ್ಲಾ ಕಾರಣರಾದವರು ವೀರೇಂದ್ರ ಸೆಹ್ವಾಗ್!

ಇತ್ತೀಚೆಗೆ ಸಹರಾ ಇಂಡಿಯಾ ಸ್ಪೋರ್ಟ್ಸ್ ಪ್ರಶಸ್ತಿ ಸಮಾರಂಭವನ್ನು ಶಾರುಖ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿತ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಉಪಸ್ಥಿತರಿದ್ದರು. ಸೆಹ್ವಾಗ್ ಅವರನ್ನು ಕುಣಿಯುವಂತೆ ಶಾರುಖ್ ವೇದಿಕೆಗೆ ಆಹ್ವಾನಿಸಿದರು. ಆದರೆ ಸಚಿನ್ ಕುಣಿದರೆ ತಾನೂ ಏನು ಬೇಕಾದರೂ ಮಾಡುವುದಾಗಿಶಾರುಖ್‌ರನ್ನು ಸೆಹ್ವ್ವಾಗ್ ಕೆಣಕಿದರು.

ಸೀದಾ ಸಚಿನ್ ಬಳಿಗೆ ಹೋದ ಶಾರುಖ್ ಅವರನ್ನು ಕೈಹಿಡಿದು ವೇದಿಕೆಗೆ ಕರೆತಂದರು. ಕೈಹಿಡಿದು ತಮ್ಮೊಂದಿಗೆ ಒಂದೆರಡು ಹೆಜ್ಜೆ ಹಾಕುವಂತೆ ಮಾಡುತ್ತಿದ್ದಂತೆ ಸಭಿಕರು ಸುಸ್ತೋ ಸುಸ್ತು. ವೀರೇಂದ್ರ ಸೆಹ್ವಾಗ್ ಕೂಡ ಮೂಕವಿಸ್ಮಿತನಾಗಿದ್ದ. ಏಕೆಂದರೆ ಈ ಹಿಂದೆ ಹಲವಾರು ಬಾರಿ ಸಚಿನ್‍ರನ್ನು ಕುಣಿಸುವ ಸಾಹಸಕ್ಕೆ ಕೈಹಾಕಿ ವಿಫಲರಾಗಿದ್ದರು.

ಯಾರೂ ಮಾಡದ ಸಾಹಸವನ್ನು ಶಾರುಖ್ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ! ಶ್ರೀಶಾಂತ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಕೂಡ ಸಚಿನ್‌ರನ್ನು ಕುಣಿಸಲು ಹರಸಾಹಸ ಮಾಡಿ ವಿಫಲರಾಗಿದ್ದರು. ಈ ಮೂಲಕ ಸಚಿನ್ ಸಹ ಹೊಸ ದಾಖಲೆ ಸೃಷ್ಟಿಸಿದ್ದಾರೆ.

More from Filmibeat

English summary
King Khan Shahrukh Khan has made the ace cricketer of the world Sachin Tendulkar dance in recently held Sahara India Sports Awards function. Sachin did slight side movements and then gave up to Sharukh. In the past Sreesanth, Harbhajan, Yuvraj also tried to make him dance but failed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X