»   » ಸುಷ್ಮಿತಾ ಸೇನ್ ಗೆ ಅಪ್ಪನಿಲ್ಲದೆ ಅಮ್ಮನಾಗುವ ಆಸೆ

ಸುಷ್ಮಿತಾ ಸೇನ್ ಗೆ ಅಪ್ಪನಿಲ್ಲದೆ ಅಮ್ಮನಾಗುವ ಆಸೆ

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಗೆ ಇದ್ದಕ್ಕಿದ್ದಂತೆ ಮಾತೃ ವಾತ್ಸಲ್ಯ ಉಕ್ಕಿಬಂದಿದೆ. ಎರಡು ಮಕ್ಕಳನ್ನು ದತ್ತು ಪಡೆದ ಬಳಿಕ ಸ್ವಂತ ಮಗುವೊಂದಕ್ಕೆ ಜನ್ಮ ನೀಡು ಆಸೆ ಸುಷ್ಮಿತಾರಲ್ಲಿ ಚಿಗುರಿದೆ. ಯಾರನ್ನೂ ಮದುವೆಯಾಗದೆ, ಅಪ್ಪನಿಲ್ಲದೆ ಜೈವಿಕ ಶಿಶುವೊಂದನ್ನು ಪಡೆಯಲು ಸುಷ್ಮಿತಾ ತೀರ್ಮಾನಿಸಿದ್ದಾರೆ.

"ಹೆಣ್ಣೆಂದೆ ಮೇಲೆ ಮಾತೃ ಬಯಕೆ ಸಹಜ. ಅಂಥಹದ್ದೇ ಆಸೆ ನನಗೆ ತಡವಾಗಿ ಮೂಡಿದೆ. ಇದರಲ್ಲಿ ಯಾವುದೇ ಹುಳುಕು ಹುಡುಕಬೇಡಿ. ವಯಸ್ಸು ಮೀರಿರುವ ಕಾರಣ ಜೈವಿಕ ಮಗುವೊಂದನ್ನು ಪಡೆಯಬೇಕು ಎಂದು ತೀರ್ಮಾನಿಸಿದ್ದೇನೆ " ಎಂದು 34ರ ಹರೆಯದ ಸುಷ್ಮಿತಾ ಹೇಳಿದ್ದಾರೆ.

2010ರ ವಿಶ್ವಸುಂದರಿ ಸ್ಪರ್ಧೆಗೆ ಪೂರ್ವ ತಯಾರಿ ನಡೆಸುತ್ತಿರುವ ಸ್ಪರ್ಧಾಳುಗಳಿಗೆ ತರಬೇತಿ ನೀಡುತ್ತಿರುವ ಸುಷ್ಮಿತಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವಿಶ್ವಸುಂದರಿ ಸ್ಪರ್ಧೆಯಲ್ಲಿ ಗೆಲ್ಲುವುದು ಹೇಗೆ ಎಂಬ ಬಗ್ಗೆ ಸ್ಪರ್ಧಾಳುಗಳಿಗೆ ಸುಷ್ಮಿತಾ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ ಜೊತೆ ಸುಷ್ಮಿತಾ ಸಿಕ್ಕಾಪಟ್ಟೆ ಅಲೆಯುತ್ತಿದ್ದಾರೆ ಎಂಬ ಸುದ್ದಿಯೂ ಇದೆ. 'ದುಲ್ಹಾ ಮಿಲ್ ಗಯಾ' ಚಿತ್ರ ತೋಪಾದ ಬಳಿಕ ಸುಷ್ಮಿತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇದೀಗ ಗಮನಹರಿಸಿದ್ದಾರೆ. ಇದು ವಾಸಿಂ ಅಕ್ರಂರನ್ನು ಮದುವೆಯಾಗುವ ಸೂಚನೆ ಎಂಬ ಗುಮಾನಿಯೂ ವ್ಯಕ್ತವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada