ನ.25ಕ್ಕೆ ಬೆಂಗಳೂರಿನಲ್ಲಿ ವಿದ್ಯಾ ಬಾಲನ್ ಡರ್ಟಿ ಡ್ಯಾನ್ಸ್

By Rajendra

ಬಾಲಿವುಡ್ ಹಾಟ್ ಬೆಡಗಿ ವಿದ್ಯಾ ಬಾಲನ್ ಮಸ್ತ್ ಐಟಂ ಡ್ಯಾನ್ಸ್ ಕಣ್ತುಂಬಿಕೊಳ್ಳಬೇಕೆ. ಹಾಗಿದ್ದರೆ ಇದೇ ಶುಕ್ರವಾರ (ನ.25) ಮಧ್ಯಾಹ್ನ 3ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್‌ಗೆ ಬನ್ನಿ. ಹಾಟ್ ಬೆಡಗಿ ವಿದ್ಯಾ ಸಹ ಆಗಮಿಸುತ್ತಿದ್ದಾರೆ.

ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ದಿ ಡರ್ಟಿ ಪಿಕ್ಚರ್' ಪ್ರಚಾರದ ಭಾಗವಾಗಿ ವಿದ್ಯಾ ಕುಣಿದು ರಂಜಿಸಲಿದ್ದಾರೆ. ವಿದ್ಯಾ ಬಾಲನ್‌ಗೆ ಇಮ್ರಾನ್ ಹಸ್ಮಿ ಮತ್ತು ತುಷಾರ್ ಕಪೂರ್ ಸಾಥ್ ನೀಡಲಿದ್ದಾರೆ. 'ಡರ್ಟಿ ಪಿಕ್ಚರ್' ಚಿತ್ರದ ಹಾಡು "ಊ ಲಾ ಲಾ.." ಈಗಾಗಲೆ ಸಾಕಷ್ಟು ಜನಪ್ರಿಯವಾಗಿದೆ. ಈ ಹಾಡಿಗೆ ವಿದ್ಯಾ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಲಿದ್ದಾರೆ.

ಸಿಲ್ಕ್ ಸ್ಮಿತಾ ಬದುಕನ್ನು ಆಧರಿಸಿದ ಸಿನಿಮಾ ಎಂದು ಪ್ರಚಾರ ಪಡೆದಿರುವ 'ಡರ್ಟಿ ಪಿಕ್ಚರ್‌'ನಲ್ಲಿ ವಿದ್ಯಾರ ಹಾಟ್ ದೃಶ್ಯಗಳು ಯುವಕರ ನಿದ್ದೆಕೆಡಿಸಿವೆ. ಬಾಲಿವುಡ್‌ನ ಬಹುನಿರೀಕ್ಷಿತ ಈ ಚಿತ್ರ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ "ಊ ಲಾ ಲಾ" ಎಂದು ಕುಣಿದು ರಸಿಕರ ಹೃದಯ ಸೂರೆಗೊಳ್ಳಲಿದ್ದಾರೆ ವಿದ್ಯಾ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮಿಸ್ ಮಾಡಿಕೊಳ್ಳಬೇಡಿ. ಮಿಸ್ ಮಾಡಿಕೊಂಡು ನಿರಾಶರಾಗಬೇಡಿ. ಬೆಸ್ಟ್ ಆಫ್ ಲಕ್! (ಒನ್‌ಇಂಡಿಯಾ ಕನ್ನಡ)

More from Filmibeat

English summary
The glamourous first look of Vidya Balan in her upcoming movie The Dirty Picture has created lot of curiosity among the movie buffs. Watch Vidya Balan, Emraan Hashmi & Tusshar perform live & go Ooh La La at Royal Meenakshi Mall on 25th November 4 pm onwards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X