ಅಭಿಮಾನದ ಪರಾಕಾಷ್ಠೆ ; ಸಂಜಯ್ ದತ್‌ಗೆ ಚಿನ್ನದ ಐಫೋನ್ ನೀಡಿದ ಪಾಕಿಸ್ತಾನದ ವ್ಯಕ್ತಿ -ಯಾರು ಈ ಗೋಲ್ಡ್ ಮ್ಯಾನ್ ?

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು.ಪ್ರೀತಿಯಿಂದ ತಲೆ ಬಾಗಿದರು.

ಇನ್ನೂ ಅಭಿಮಾನ ಅಂದರೆ ಕೆಲವರು ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುತ್ತಾರೆ. ದೊಡ್ಡ ಗಾತ್ರದ ಹಾರ ಹಾಕುತ್ತಾರೆ. ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುತ್ತಾರೆ. ಕಟೌಟು ನಿರ್ಮಿಸುತ್ತಾರೆ. ಚಿತ್ರಮಂದಿರದ ಒಳಗೆ ನಾಣ್ಯ ಮತ್ತು ಹೂವು ಕೂಡ ಎರಚುತ್ತಾರೆ. ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟುಹಬ್ಬದಂತೆ ಆಚರಿಸುತ್ತಾರೆ. ಮತ್ತೂ ಕೆಲವು ಹಣವಂತರು ತಮ್ಮ ನೆಚ್ಚಿನ ನಾಯಕ ಅಥವಾ ನಾಯಕಿಯ ಹೆಸರಿಗೆ ಆಸ್ತಿಯನ್ನು ಬರೆಯುತ್ತಾರೆ. ದುಬಾರಿ ಉಡುಗೊರೆಗಳನ್ನು ನೀಡುತ್ತಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನ ಮಾಡುತ್ತಾರೆ. ಉದಾಹರಣೆಗೆ ಕಾಶಿಫ್ ಜಮೀರ್.

24K Cross-Border Love Sanjay Dutt Gifted Gold iPhone by Pakistani Fan

ಹೌದು, ಕಾಶಿಫ್ ಜಮೀರ್.. ಪಾಕಿಸ್ತಾನದ ಪ್ರಜೆ. ಶತ್ರು ರಾಷ್ಟ್ರದ ವಿವಾದಾತ್ಮಕ ವ್ಯಕ್ತಿ. ಟಿಕ್ ಟಾಕ್ ಸ್ಟಾರ್. ಇವರದ್ದೇ ಒಡೆತನದ ಝೆಡ್ ಎಸ್ ಬಿ ಗ್ರೂಪ್ ಎಂಬ ಕಂಪನಿ ಇದೆ.

ಇನ್ನು ಇವರ ಜೀವನ ಶೈಲಿ ತುಂಬಾನೇ ಅದ್ಧೂರಿ ಮತ್ತು ದುಬಾರಿ. ಪಾಕಿಸ್ತಾನದಲ್ಲಿ ''ಗೋಲ್ಡ್ ಮ್ಯಾನ್'' ಎಂದೇ ಕರೆಯಲ್ಪಡುವ ಇವರ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳು ಕೂಡ ದಾಖಲಾಗಿವೆ. ವಂಚನೆ, ಬೆದರಿಕೆ ಮತ್ತು ಹಣಕಾಸಿನ ಅವ್ಯವಹಾರದ ಆರೋಪದ ಮೇಲೆ ಜೈಲು ಶಿಕ್ಷೆಯನ್ನೂ ಕೂಡ ಅನುಭವಿಸಿದ್ದಾರೆ ಕಾಶಿಫ್ ಜಮೀರ್.

ಇಂಥಾ ಕಾಶಿಫ್ ಜಮೀರ್ ಬಾಲಿವುಡ್‌ನ ಬಹುದೊಡ್ಡ ಅಭಿಮಾನಿ. ಅಂತರಾಷ್ಟ್ರೀಯ ಸೆಲೆಬ್ರಿಟಿಗಳೆಂದರೆ ಅತೀವ ಪ್ರೀತಿ. ಸಂಜಯ್ ದತ್ ಅಂದರೆ ಪ್ರಾಣ. ಹೀಗಾಗಿಯೇ ದುಬೈನಲ್ಲಿ ಸಂಜಯ್ ದತ್ ಇದ್ದಾರೆ ಎಂಬ ವಿಚಾರ ಗೊತ್ತಾಗಿದ್ದೇ ತಡ, ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿರುವ ಕಾಶಿಫ್ ಜಮೀರ್, ಸಂಜಯ್ ದತ್‌ಗೆ ಚಿನ್ನದ ಐಫೋನ್‌ನ ಉಡುಗೊರೆಯಾಗಿ ನೀಡಿದ್ದಾರೆ.

24 ಕ್ಯಾರೆಟ್ ಚಿನ್ನದ ಈ ಐಫೋನ್ 17ನ ಮತ್ತೊಂದು ವಿಶೇಷ ಅಂದರೆ ಈ ಫೋನ್‌ನ ಹಿಂಭಾಗದಲ್ಲಿ ಸಂಜಯ್ ದತ್ ಅವರ ತಂದೆ ಸುನಿಲ್ ದತ್ ಮತ್ತು ತಾಯಿ ನರ್ಗಿಸ್ ದತ್ ಅವರ ಭಾವಚಿತ್ರಗಳನ್ನು ಕೆತ್ತಲಾಗಿದೆ. ಸಹಜವಾಗಿಯೇ ಅಭಿಮಾನಿಯ ಈ ಉಡುಗೊರೆಯನ್ನು ಕಂಡು ಸಂಜಯ್ ದತ್ ಭಾವುಕರಾಗಿದ್ದಾರೆ. ಅಭಿಮಾನಿಯ ಅಭಿಮಾನಕ್ಕೆ ತಲೆ ಬಾಗಿದ್ದಾರೆ.

24K Cross-Border Love Sanjay Dutt Gifted Gold iPhone by Pakistani Fan

ಇನ್ನೂ ಕೇವಲ ಐಫೋನ್ ಮಾತ್ರವಲ್ಲ ಸಂಜಯ್ ದತ್ ಅವರ ಪತ್ನಿ ಮಾನ್ಯತಾ ಅವರಿಗಾಗಿ ಹನ್ನೊಂದು ಲಕ್ಷ ಬೆಲೆ ಬಾಳುವ ಜ್ಯುವೆಲರಿ ಸೆಟ್‌ನ್ನೂ ಕೂಡ ಈ ಕಾಶಿಫ್ ಉಡುಗೊರೆಯನ್ನಾಗಿ ಸಂಜಯ್ ದತ್‌ಗೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸದ್ಯ ಕಾಶಿಫ್ ಜಮೀರ್ ಮತ್ತು ಸಂಜಯ್ ದತ್ ಅವರ ಈ ಭೇಟಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕೆಲವರು ಫೋನ್ ಮೇಲಿನ ಚಿನ್ನ ನಕಲಿಯಾಗಿರಬಹುದು ಎಂದು ಲೇವಡಿ ಮಾಡಿದರೆ ಮತ್ತೊಬ್ಬರು ಈ ಹಿಂದೆ ಇದೇ ರೀತಿ ಕಾಶಿಫ್ ಬೇರೆ ನಟನಿಗೆ ನಕಲಿ ಚಿನ್ನ ನೀಡಿದ್ದರು ಎಂದು ಹಳೆಯ ಘಟನೆ ರೀಕಾಲ್ ಮಾಡಿಕೊಂಡಿದ್ದಾರೆ.

ಇನ್ನೂ ಕೆಲವರು ಪಾಕಿಸ್ತಾನದ ವ್ಯಕ್ತಿಯಿಂದ ಉಡುಗೊರೆಯನ್ನು ಸ್ವೀಕರಿಸಿದ್ದಕ್ಕೆ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಸಂಜಯ್ ದತ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಅಸಮಾಧಾನ-ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆಯಿಂದ ಸಂಜು ಬಾಬಾ ಉಡುಗೊರೆ ಪಡೆದಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

More from Filmibeat

English summary
Sanju Baba goes 24K! See the stunning gold-plated iPhone gifted to Sanjay Dutt by a Pakistani influencer. A massive tribute to the star before his latest movie hit.
Read more about: fans sanjay dutt viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X