ಹೊಸ ನಟಿಗೆ ಅಭಿಷೇಕ್ ಪಾಠ, ಐಶೂ ಗಪ್ ಚುಪ್!
ಬಾಲಿವುಡ್ ಯುವ ಬ್ಯೂಟಿ, ಅನಿಲ್ ಕಪೂರ್ ಮುದ್ದಿನ ಮಗಳು ಸೋನಮ್ ಕಪೂರ್ ಗೆ ಬಾಲಿವುಡ್ ನಲ್ಲಿ ಬದುಕುವುದು ಹೇಗೆ? ಯಾವ ರೀತಿ ಇದ್ದರೆ ಯಶಸ್ವಿಯಾಗಲು ಸಾಧ್ಯ ಎಂಬ ಪಾಠವನ್ನು ಛೋಟಾ ಬಚ್ಚನ್ ಅಭಿಷೇಕ್ ಹೇಳಿಕೊಡುತ್ತಿದ್ದಾರೆ. ಅವಳಿನ್ನೂ ಅಂಬೆಗಾಲಿಕ್ಕುತ್ತಿರುವ ಮುಗ್ಧೆ ಎಂಬುದು ಅಭಿ ಕಾಳಜಿಗೆ ಕಾರಣ.
ರೇಡಿಯೋ ಒಂದರಲ್ಲಿ ಸಂದರ್ಶನ ಕೊಡುತ್ತಿದ್ದ ವೇಳೆ "ನೀನಿನ್ನೂ ಸ್ಮಾರ್ಟ್ ಆಗಬೇಕು. ಬಾಲಿವುಡ್ ಉದ್ಯಮ ಯಾರಿಗೂ ಕಾಯುವುದಿಲ್ಲ. ನಿನಗಿಷ್ಟ ಬಂದ ರೀತಿಯಲ್ಲಿ ಮಾಡುವುದಾಗಲೀ ಮಾತನಾಡುವುದಾಗಲೀ ಮಾಡಬಾರದು. ನೀನಿನ್ನೂ ತುಂಬಾ ಕಲಿಯಬೇಕು" ಎಂದು ಹಿತೈಷಿಯಾಗಿ ನುಡಿದಿದ್ದಾನೆ ಅಭಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ವಿಷಯ ಪತ್ನಿ ಐಶ್ವರ್ಯಾ ರೈಗೆ ತಿಳಿದಾಗ ಆಕೆ ತನ್ನ ಗಂಡನ ಉದಾರ ಗುಣ ನೋಡಿ ಹೃದಯ ತುಂಬಿ ಬಂದು ಗಪ್ ಚುಪ್ ಆದರಂತೆ. ಇಂಡಸ್ಟ್ರಿಯಲ್ಲಿ ಎಷ್ಟು ಜನರಿಗೆ ಇಂತಹ ಒಳ್ಳೆಯ ಗುಟ ಇರುತ್ತೆ ಹೇಳಿ? ಸೋನಮ್ ಕಪೂರ್ ಮತ್ತು ಅಭಿಷೇಕ್, ಡೆಲ್ಹಿ 6 ಹಾಗೂ ಪ್ಲೈಯರ್ಸ್ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











