For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಮನಿಷಾ ಕೋಯಿರಾಲಾ ಫುಲ್ ಟೈಟ್

  By Mahesh
  |

  ಹಿಂದಿ ಚಿತ್ರರಂಗದ ಪ್ರತಿಭಾವಂತ ನಟಿ ಮನೀಷಾ ಕೊಯಿರಾಲಾ ಈಗ ಮದಿರೆಯ ದಾಸಿಯಾಗಿದ್ದಾಳೆ. ಸಂಸಾರದಲ್ಲಿ ಒಡಕು ಮೂಡುತ್ತಿದ್ದಂತೆ ತೀವ್ರವಾಗಿ ನೊಂದುಕೊಂಡ ನೇಪಾಳಿ ಬೆಡಗಿ ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ನೋವು ತೋಡಿಕೊಂಡಿದ್ದಳು. ನಂತರ ತನ್ನ ಪತಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಳು. ಆದರೆ.. ಈಗ

  ಮುಂಬೈನ ಖಾಸಗಿ ಪಾರ್ಟಿಗೆ ಬಂದಿದ್ದ ಮನೀಷಾ ಸಿಕ್ಕಾಪಟ್ಟೆ ಕುಡಿದು ನಿಯಂತ್ರಣ ಕಳೆದುಕೊಂಡು ತೂರಾಡಿದ ಘಟನೆ ನಡೆದಿದೆ. ವರ್ಸೊವಾದಲ್ಲಿ ನಿರ್ಮಿಸಲಾಗಿದ್ದ ಹೊಸ ರೆಸ್ಟೋರೆಂಟ್ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಮನೀಷಾ ಎರ್ರಾಬಿರ್ರಿ ಮದ್ಯ ಸೇವಿಸಿದರೂ ಯಾರೂ ಆಕೆಯನ್ನು ತಡೆಯುವ ಪ್ರಯತ್ನ ಮಾಡಿರಲಿಲ್ಲ.

  ಪರಿಣಾಮ, ತಡರಾತ್ರಿ ಪಾರ್ಟಿಯಿಂದ ಹೊರಬಿದ್ದ ಮನೀಷಾಳಿಗೆ ತನ್ನ ಕಾರು ಎಲ್ಲಿದೆ ಎಂದು ಹುಡುಕುವುದು ಕಷ್ಟವಾಗಿದೆ. ತೂರಾಡುತ್ತಿದ್ದ ಮನೀಷಾಳನ್ನು ಯಾರೋ ಆಪ್ತರೊಬ್ಬರು ಕಂಡು ಆಕೆಯನ್ನು ಜಾಗೃತಿಯಿಂದ ಮನೆಗೆ ತಲುಪಿಸಿದ್ದಾರೆ. ಆದರೆ, ಅಷ್ಟರಲ್ಲಿ ಆಕೆ ಇದ್ದ ಸ್ಥಿತಿಯ ಫೋಟೋಗಳನ್ನು ಚತುರ ಛಾಯಾಗ್ರಾಹಕರು ತೆಗೆದು ಪ್ರಕಟಿಸಿಬಿಟ್ಟಿದ್ದಾರೆ.

  ಅಂದ ಹಾಗೆ, ಮನೀಷಾ ಬಂದಿದ್ದು ತನ್ನ ಹಳೆ ಗೆಳೆಯ ಪ್ರಶಾಂತ್ ಚೌಧರಿ ಪಾರ್ಟಿಗೆ, ಪ್ರಶಾಂತನ ಸನಿಹದಲ್ಲಿ ಶಾಂತವಾಗಿರಬೇಕಿದ್ದ ಮನೀಷಾಳ ಮನಸ್ಸು ಕೋಲಾಹಲಗೊಂಡಿದ್ದು ಯಾಕೋ ಇನ್ನೂ ತಿಳಿದಿಲ್ಲ.

  English summary
  Talented Bollywood Actress Manisha Koirala was snaped in a drunken state. Manisha dressed in casuals looked very dull and lost her control and close aides helped her to home. Manisha recently talked about divorcing her husband. Manisha was at the launch party restaurant lounge owned by her ex boyfriend Prashant Chaudhari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X