ಬೆಂಗಳೂರಿಗೆ 'ಘಜನಿ' ಆಸಿನ್ ಬಂದಿದ್ದು ಯಾಕೆ?

ಅವರು ಬೆಂಗಳೂರಿಗೆ ಬಂದ ಕಾರಣ, ಸದ್ಯದಲ್ಲಿ ಪ್ರಾರಂಭವಾಗಲಿರುವ 57ನೇ ಫಿಲಂ ಫೇರ್ ಪ್ರಶಸ್ತಿಯ ಪೂರ್ವಭಾವಿ ಉದ್ಘಾಟನಾ ಕಾರ್ಯಕ್ರಮಕ್ಕೆ. ಈ ಸಂದರ್ಭದಲ್ಲಿ "ಯಾವಾಗಲೂ ನನ್ನ ನೆನಪಿನಲ್ಲಿ ಇರುವ ಸಿಟಿಗಳಲ್ಲಿ ಬೆಂಗಳೂರು ಕೂಡ ಒಂದು. ಯಾಕೆಂದರೆ ನನ್ನ ಬಹುತೇಕ ಗೆಳತಿಯರು ಇಲ್ಲೇ ಇದ್ದಾರೆ" ಅಂದಿದ್ದಾರೆ ಆಸಿನ್.
ಏಪ್ರಿಲ್ ನಲ್ಲಿ ಬಿಡುಗಡೆ ಆಗಲಿರುವ ಚಿತ್ರ 'ಹೌಸ್ ಫುಲ್ 2' ನಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಹಾಗೂ ಅಜಯ್ ದೇವ್ ಗನ್, ಅಭಿಷೇಕ್ ಬಚ್ಚನ್ ಜೊತೆ 'ಭೋಲೆ ಬಚ್ಚನ್' ಚಿತ್ರದಲ್ಲಿ ಸದ್ಯ ಆಸಿನ್ ನಟಿಸುತ್ತಿದ್ದಾರೆ. ಈಗ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಆಸಿನ್, ಈ ಮೊದಲು ಸೌತ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಮಿಂಚಿದ್ದರು. ಮುಂದಿನ ಪುಟ ನೋಡಿ...
More from Filmibeat
English summary
Bollywood Actress asin came to Bangalore for 57th film fare award function preparation.


Click it and Unblock the Notifications











