ಸತ್ಯ ಸಾಯಿಗೆ ತಲೆ ಬಾಗಿದ ಬಾಲಿವುಡ್

By Mahesh

Sathya Sai Baba
ಬಾಲಿವುಡ್, ಟಾಲಿವುಡ್, ಹಾಲಿವುಡ್ ಸೇರಿದಂತೆ ಬಹಳಷ್ಟು ನಟರು, ನಿರ್ಮಾಪಕರು ಸತ್ಯಸಾಯಿಬಾಬಾ ಭಕ್ತರಾಗಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್, ಹಾಲಿವುಡ್ ತಾರೆ ರಿಕಿ ಮಾರ್ಟಿನ್ ಸೇರಿದಂತೆ ಹಲವಾರು ಮಂದಿ, ಬಾಬಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವು ನಟರು ತಮ್ಮ ಟ್ವೀಟರ್ ಖಾತೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

"ನಾನು ಬೆಂಗಳೂರಿನಲ್ಲಿ ಕೂಲಿ ಚಿತ್ರೀಕರಣ ಸಂದರ್ಭದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ, ಬಾಬಾರಿಂದ ವಿಭೂತಿ ಪ್ರಸಾದ ಬಂದಿತ್ತು. ಗುಣಮುಖನಾದ ಮೇಲೆ ಬಾಬಾರನ್ನು ಕಂಡ ಮೇಲೆ ಮಾನಸಿಕ ನೆಮ್ಮದಿ ಸಿಕ್ಕಿತು " ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಮಧು ಭಂಡಾರ್ಕರ್, ಬಾಬಾ ಸಾವಿನ ಸುದ್ದಿ ಕೇಳುತ್ತಿದಂತೆ ಶಾಕ್ ಆಯಿತು. ನನಗೂ ಬಾಬಾ ಸ್ಫೂರ್ತಿಯಾದ ಆದರ್ಶವ್ಯಕ್ತಿ. ಅವರ ಸಮಾಜಿಕ ಸೇವೆ ನನ್ನ ಚಿತ್ರಗಳಿಗೆ ಸ್ಪೂರ್ತಿ ಎಂದು ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟ್ಟರ್ ನಲ್ಲಿ ಸಂತಾಪ: ಇನ್ನೊಂದೆಡೆ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಕೂಡ ಟ್ವಿಟ್ಟರ್‌ನಲ್ಲಿ ಬಾಬಾಗೆ ಆತ್ಮಶಾಂತಿ ದೊರೆಯಲೆಂದು ನನ್ನ ಹೃದಯ ಬಯಸುತ್ತಿದೆ ಎಂದು ಬರೆದಿದ್ದಾರೆ. ನಟ ರಿತೇಶ್ ದೇಶ್‌ಮುಖ್, ನಾನು ಒಂದು ಬಾರಿ ಅವರನ್ನು ಭೇಟಿಯಾಗಿದ್ದೆ. ಅವರು ತಮ್ಮ ಭಕ್ತರ ಮೇಲಿಟ್ಟಿರುವ ಪ್ರೀತಿ ಅನುಸ್ಮರಣೀಯ.

ನಮ್ಮ ಪ್ರೀತಿಯ ಬಾಬಾನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ನಟ ರಾಣಾ ದಗ್ಗುಬತಿ, ಆರ್. ಮಾಧವನ್ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಖ್ಯಾತ ನಟ ಅನುಪಮ್ ಖೇರ್, ವಿಶ್ವದಾದ್ಯಂತ ಬಾಬಾರಿಗೆ ಕೋಟ್ಯಾಂತರ ಮಂದಿ ಭಕ್ತರಿದ್ದಾರೆ. ಬಾಬಾ ಭಕ್ತರ ಮೇಲಿಟ್ಟಿರುವ ಪ್ರೀತಿ ಮತ್ತು ನಿಸ್ವಾರ್ಥ ಸೇವೆಯಿಂದಲೇ ಇಷ್ಟೊಂದು ಭಕ್ತರನ್ನು ಆಕರ್ಷಿಸಲು ಸಾಧ್ಯವಾಗಿದೆ. ಬಾಬಾರ ಹಿತವಚನ ಎಷ್ಟೋ ಮಂದಿಗೆ ಹೊಸ ಜೀವನ ನೀಡಿದೆ ಎಂದಿದ್ದಾರೆ.

ಬಾಬಾಗೆ ತಲೆಬಾಗದ ತಾರೆಗಳಿಲ್ಲ: ಅಮಿತಾಬ್ ಬಚ್ಚನ್, ಮೋಹನ್ ಲಾಲ್, ಐಶ್ವರ್ಯಾ ರೈ, ಮನೋಜ್ ಕುಮಾರ್, ವಿವೇಕ್ ಒಬೆರಾಯ್, ಗಾಯಕ ಮಹಮ್ಮದ್ ರಫಿ, ಗಾಯಕಿ ಪಿ ಸುಶೀಲಾ, ಕೃಷ್ಣ ಕುಮಾರಿ, ಜಮುನಾ, ಚಿರಂಜೀವಿ, ಬಾಲಕೃಷ್ಣ, ಮೋಹನ್ ಬಾಬು, ರಾಣಾ ದಗ್ಗುಬಾತಿ ಸೇರಿದಂತೆ ಅನೇಕ ನಟ ನಟಿಯರು ಸಾಯಿಬಾಬಾ ಅವರ ಭಕ್ತರಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Bollywood Mourns at Sai Baba Demise. Big B, Ram Gopal Varma, Abhishek, Rana Daggubati, Jackie Shroff, R Madhvan express grief at the death of Godman Sai Baba. Tollywood stars visited Prashanti Nilayam and payed homage to Sai Baba.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X