ಬಾಲಿವುಡ್‌ಗೆ ದಕ್ಷಿಣ ತಾರೆ ಇಲಿಯಾನಾ ಪ್ರಯಾಣ
ದಕ್ಷಿಣ ಭಾರತದ ಹೊಸ ಮಿಂಚು ಇಲಿಯಾನಾ ಬಾಲಿವುಡ್ ಅಂಗಳಕ್ಕೆ ಜಿಗಿಯಲು ಸಿದ್ಧತೆ ನಡೆಸಿದ್ದಾರೆ. ಮಲೆಯಾಳಿ ಕುಟ್ಟಿ ಅಸಿನ್ ಹಾಗೂ ತಮಿಳು ಪೆಣ್ಣು ತ್ರಿಷಾರನ್ನು ಬಾಲಿವುಡ್ ಅಪ್ಪಿಕೊಂಡ ಬಳಿಕ ಇಲಿಯಾನಾರನ್ನು ಕೈಬೀಸಿ ಕರೆಯುತ್ತಿದೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯಾಗಿ ಇಲಿಯಾನಾ ಗುರುತಿಸಿಕೊಂಡಿದ್ದಾರೆ.
"ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವುದಕ್ಕಿಂತ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಬೇಕು ಎಂಬುದು ಇಲಿಯಾನಾ ಸಿದ್ಧಾಂತವಂತೆ. ಈ ಸಿದ್ಧಾಂತಕ್ಕೆ ತಾವು ಸದಾ ಬದ್ಧರಾಗಿರುವುದಾಗಿ" ಇಲಿಯಾನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ತ್ರಿ ಈಡಿಯಟ್ಸ್' ಚಿತ್ರದಲ್ಲಿ ಕರೀನಾ ಕಪೂರ್ ಪೋಷಿಸಿದ್ದ ಪಾತ್ರವನ್ನು ರೀಮೇಕ್ ಚಿತ್ರದಲ್ಲಿ ಇಲಿಯಾನ ಪೋಷಿಸಲಿರುವುದಾಗಿ ತಿಳಿಸಿದ್ದಾರೆ.
ಕರೀನಾರ ಅಭಿನಯವನ್ನು ನಾನು ಎಲ್ಲೂ ಅನುಕರಣೆ ಮಾಡೊಲ್ಲ. ತ್ರಿ ಈಡಿಯಟ್ಸ್ ಚಿತ್ರವನ್ನು ಎರಡು ಬಾರಿ ನೋಡಿದ್ದೇನೆ. ತ್ರಿ ಈಡಿಯಟ್ಸ್ ರೀಮೇಕ್ ಚಿತ್ರದಲ್ಲಿ ನನ್ನದೇ ಆದ ಶೈಲಿಯಲ್ಲಿ ನಟಿಸುತ್ತೇನೆ. ಬಾಲಿವುಡ್‌ನಿಂದ ಪದೇ ಪದೇ ಕರೆಗಳು ಬರುತ್ತಿವೆ. ಆದರೆ ಯಾವುದೂ ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ'ಹುಡುಗ ಹುಡುಗಿ' ಚಿತ್ರದಲ್ಲಿ ಹಾಗೆ ಬಂದು ಹೀಗೆ ಕುಣಿದಿದ್ದಕ್ಕೆ ರು.30 ಲಕ್ಷ ಎಣಿಸಿದ್ದರು ಇಲಿಯಾನಾ. ಈಕೆ ಒಂದು ಹಾಡಿಗೆ ಪಡೆಯುವ ಸಂಭಾವನೆ ಲಕ್ಕಿ ಸ್ಟಾರ್ ರಮ್ಯಾ ಇಡೀ ಚಿತ್ರಕ್ಕೆ ಪಡೆಯುವ ಸಂಭಾವಣೆಗೆ ಸಮವಾಗುತ್ತದೆ ಎಂದರೆ ನಂಬಲೇ ಬೇಕು.


Click it and Unblock the Notifications











