ಬರಲಿದೆ ಕತ್ರಿನಾ ಕೈಫ್ ಮತ್ತೊಂದು ಹಾಟ್ ಐಟಂ ಸಾಂಗ್!
'ತೀಸ್ ಮಾರ್ ಖಾನ್' ಚಿತ್ರದ "ಶೀಲಾ ಕಿ ಜವಾನಿ..." ಐಟಂ ಹಾಡಿಗೆ ತಕ್ಕ ಉತ್ತ್ತರ ನೀಡಲು ಬಾಲಿವುಡ್ ತಾರೆ ಕತ್ರಿನಾ ಕೈಫ್ ತಯಾರಿ ನಡೆಸಿದ್ದಾರೆ. ತನ್ನದೇ ಐಟಂ ಹಾಡನ್ನು ಮೀರಿಸುವ ಮೂಲಕ ಮತ್ತೆ ಚಿತ್ರ ರಸಿಕರ ಹೃದಯಕ್ಕೆ ಲಗ್ಗೆ ಹಾಕಲು ಸಿದ್ಧವಾಗಿದ್ದಾರೆ. ತನ್ನ ಮುಂದಿನ ಚಿತ್ರ "ಮೇರೆ ಬ್ರದರ್ ಕಿ ದುಲ್ಹನ್" ಚಿತ್ರದಲ್ಲಿ ಕತ್ರಿನಾ ಮತ್ತೊಮ್ಮೆ ಯರ್ರಾ ಬಿರ್ರಿಯಾಗಿ ಸೊಂಟವನ್ನು ಕುಣಿಸಲಿದ್ದಾರೆ.
'ತೀಸ್ ಮಾರ್ ಖಾನ್' ಚಿತ್ರದಂತೆ ಈಗ ಬರಲಿರುವ ಹಾಡು ಸಖತ್ ಹಾಟ್ ಮತ್ತು ಸ್ಪೈಸಿಯಾಗಿರುತ್ತದಂತೆ. ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ ಈಗಾಗಲೆ ಕತ್ರಿನಾಗೆ ಐಟಂ ಹಾಡಿನ ಬಗ್ಗೆ ವಿಶೇಷ ಸೂಚನೆಗಳು ಕೊಟ್ಟಾಗಿದೆಯಂತೆ. ಇನ್ನು ಕತ್ರಿನಾ ಕುಣಿಯುವುದೊಂದೇ ಬಾಕಿ. "ಶೀಲಾ ಕಿ ಜವಾನಿ" ಹಾಡನ್ನು ಮೀರಿಸುವಂತಿರಬೇಕು ಎಂಬುದು ಚೋಪ್ರ ಹುಕುಂ. ಅದಕ್ಕೆ ತಕ್ಕಂತೆ ಕತ್ರಿನಾ ಕೂಡ ತಮ್ಮ ಅಂಗಾಂಗಳನ್ನು ಕುಣಿಸಲಿದ್ದಾರಂತೆ.
'ಮೈ ಬ್ರದರ್ ಕಿ ದುಲ್ಹನ್' ಚಿತ್ರದಲ್ಲಿ ಕತ್ರಿನಾ ಕೈಫ್ ಜೊತೆ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನಿ ಗಾಯಕ ಅಲಿ ಜಫರ್ ಅಭಿನಯಿಸುತ್ತಿದ್ದಾರೆ. ಇದೊಂಥರಾ ಟಪಾಂಗುಚಿ ಚಿತ್ರವಂತೆ. ಅಲಿ ಅಬ್ಬಾಸ್ ಜಫರ್ ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಸೆಪ್ಟೆಬರ್ 9, 2011ರಂದು ಚಿತ್ರವನ್ನು ತೆರೆಗೆ ತರುವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.


Click it and Unblock the Notifications











