ಬೆಳ್ಳಿತೆರೆಗೆ ಜಾರ್ಜ್ ಬುಷ್ ಮೇಲೆ ಶೂ ಎಸೆದವನ ಕಥೆ

By Rajendra

ಬಾಲಿವುಡ್‌ನಲ್ಲಿ ವಿಭಿನ್ನ ಪ್ರಯೋಗಗಳಿಗೆ ಹೆಸರಾದ ನಿರ್ದೇಶಕ ಮಹೇಶ್ ಭಟ್. ಈ ಬಾರಿ ಅವರು ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಬುಷ್‌ ಮೇಲೆ ಶೂ ಎಸೆದವನ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. 'The Last Salute' ಎಂಬ ನಾಟಕ ಚಿತ್ರವಾಗುತ್ತಿದೆ. ಈ ನಾಟಕದ ಕರ್ತೃ ಇರಾಕಿನ ಪತ್ರಕರ್ತ ಮುಂತಾಧರ್ ಅಲ್ ಝೈಡಿ ಎಂಬುವವನು.

ಈತ ಬೇರಾರು ಅಲ್ಲ ಜಾರ್ಜ್ ಬುಷ್ ಮೇಲೆ ಶೂ ಎಸೆದಾತ. ಈತನೇ ಈ ನಾಟಕವನ್ನು ರಚಿಸಿದ್ದು ಇತ್ತೀಚೆಗೆ ನವದೆಹಲಿಯಲ್ಲಿ ಪ್ರದರ್ಶನಗೊಂಡಿತ್ತು. ಇದನ್ನು ವೀಕ್ಷಿಸಿದ ಮಹೇಶ್ ಭಟ್, ಚಿತ್ರ ಮಾಡುವುದಾಗಿ ತಿಳಿಸಿದ್ದಾರೆ. ನಾಟಕದ ಹೆಸರೇ ಚಿತ್ರದ ಶೀರ್ಷಿಕೆಯಾಗಲಿದೆ.

ಈ ಚಿತ್ರಕ್ಕೆ ಪೂಜಾ ಭಟ್ ಮತ್ತು ದಿನೊ ಮೋರಿಯಾ ಸಹ ನಿರ್ಮಾಪಕರು. ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಮಧ್ಯ ಪ್ರಾಚ್ಯದ ನಿರ್ದೇಶಕರೊಬ್ಬರಿಗೆ ಒಪ್ಪಿಸುವ ಸಾಧ್ಯತೆ ಇದೆ. ಹಾಲಿವುಡ್ ಚಿತ್ರತಂಡದೊಂದಿಗೆ ಸಂಪೂರ್ಣ ಚಿತ್ರವನ್ನು ಲೆಬನಾನ್‌ನಲ್ಲಿ ಚಿತ್ರೀಕರಿಸಲಾಗುತ್ತಂತೆ. ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ. (ಏಜೆನ್ಸೀಸ್)

More from Filmibeat

English summary
Maverick director Mahesh Bhatt is all set to bring 'The Last Salute' play on silver screen. The positive response for the drama, which was premiered last week in New Delhi, has made him to make the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X