ಬೆಡಗಿ ದೀಪಿಕಾ ಪಡುಕೋಣೆ ಅಡಿಭಾಗಕ್ಕೆ ಕೆಂಪಿರುವೆ ಮುತ್ತಿಗೆ!!
ಬಾಲಿವುಡ್ ಚಿತ್ರಜಗತ್ತಿನಿಂದ ಗಮ್ಮತ್ತಾದ ಸುದ್ದಿಯೊಂದು ತೇಲಿ ಬಂದಿದೆ. ಅದೇನೆಂದರೆ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಬೆನ್ನು, ಅಡಿಭಾಗಕ್ಕೆ ಕೆಂಪಿರುವೆ ಮುತ್ತಿಗೆ ಹಾಕಿರುವುದು. ಹೇಳಿಕೇಳಿ ಕೆಂಪಿರುವೆಗಳೊಂದಿಗೆ ಸರಸವಾಡಲು ಹೋದರೆ ಇನ್ನೇನಾಗುತ್ತದೆ ಹೇಳಿ! ಕೆಂಪಿರುವೆಗಳು ದೀಪಿಕಾ ಅಡಿಭಾಗಕ್ಕೆ ಬಿಸಿ ಮುಟ್ಟಿಸಿವೆ! ಇದೆಲ್ಲಾ ಆಗಿದ್ದು ಐಟಂ ಹಾಡೊಂದರೆ ಚಿತ್ರೀಕರಣದಲ್ಲಿ.
ಆಗಿದ್ದೇನೆಂದರೆ ರೋಹನ್ ಸಿಪ್ಪಿ ನಿರ್ಮಾಣದ 'ದಮ್ ಮಾರೊ ದಮ್'ಹಾಟ್ ಸಾಂಗ್ ಒಂದರ ಚಿತ್ರೀಕರಣ ನಡೆಯುತ್ತಿತ್ತು. ಮೊದಲೇ ಇದು ಐಟಂ ಸಾಂಗ್. ಮೈಮೇಲೆ ಒಂದಷ್ಟು ಇರುವೆಗಳನ್ನು ಬಿಟ್ಟು ಚಿತ್ರೀಕರಿಸಿದರೆ ಹೇಗೆ ಎಂಬ ಅದ್ಭುತ ಐಡಿಯಾ ನಿರ್ಮಾಪಕರ ತಲೆಗೆ ಬಂದಿದೆ. ಅದನ್ನು ತಕ್ಷಣ ಕಾರ್ಯಾಚರಣೆಗೆ ತಂದಿದ್ದಾರೆ. ಕೂಡಲೆ ಇರುವೆಗಳನ್ನು ತರಿಸಿದ್ದಾರೆ.
ಮೈ ಮೇಲೆ ಇರುವೆ ಬಿಟ್ಟುಕೊಳ್ಳಲು ಮೊದಲು ದೀಪಿಕಾ ಸುತಾರಾಂ ಒಪ್ಪಲಿಲ್ಲವಂತೆ. ಬಳಿಕ ಹೇಗೋ ಮನವರಿಕೆ ಮಾಡಿ ನಿರ್ಮಾಪಕ ಸಿಪ್ಪಿ ಒಪ್ಪಿಸಿದರಂತೆ. ಬಳಿಕ ಸರಿಸುಮಾರು 50-60 ಇರುವೆಗಳನ್ನು ದೀಪಿಕಾ ಮೈಮೇಲೆ ಬಿಟ್ಟು ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರೀಕರಣ ಮುಗಿಯುವಷ್ಟರಲ್ಲಿ ಇರುವೆಗಳ ಕಡಿತದಿಂದ ದೀಪಿಕಾ ಅಡಿಭಾಗ ಕೆಂಪಾದವೋ ಎಲ್ಲ ಕೆಂಪಾದವೋ!!


Click it and Unblock the Notifications











