ಅಣ್ಣಾ ಬೆಂಬಲಿಗರಿಗೆ ಸಲ್ಮಾನ್ 'ಬಾಡಿಗಾರ್ಡ್' ಗೂಸಾ

By Mahesh

Salman Khan
ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಜ್ಜೆ ಇಟ್ಟೆಡೆಯೆಲ್ಲಾ ಏನಾದರೂ ಕಿತಾಪತಿ ಗ್ಯಾರಂಟಿ. ದೇಶದ ತುಂಬಾ ಅಣ್ಣಾ ಹವಾ ಇರುವಾಗ ಬಾಲಿವುಡ್ ನ ಬಿಗ್ ಥ್ರೀ ಸ್ಟಾರ್ ಗಳು ಮಾತ್ರ ಮೌನವ್ರತಕ್ಕೆ ಶರಣಾಗಿರುವುದು ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿದೆ.

ಕಾನ್ಪುರಕ್ಕೆ ಬಂದಿದ್ದ ಸಲ್ಮಾನ್ ರನ್ನು ಅಡ್ಡಗಟ್ಟಿದ ಅಣ್ಣಾ ಹಜಾರೆ ಬೆಂಬಲಿತ ಕಾರ್ಯಕರ್ತರು 'ಏನಪ್ಪ ಸಲ್ಲೂ, ಅಣ್ಣಾ ಉಪವಾಸ ಕೂತಿದ್ದಾರೆ. ನೀನು ಬೆಂಬಲ ಕೊಡೊದಿಲ್ವ' ಎಂದು ಕೂಗಿ ಕೇಳಿದ್ದಾರೆ.

ನಂತರ ಸಲ್ಮಾನ್ ಇದ್ದ ಕಾರಿನ ಬಳಿಗೆ ಕಾರ್ಯಕರ್ತರು ಬರುತ್ತಿದ್ದಂತೆ ಅವರ ಮೇಲೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಗಳು ಹಲ್ಲೆ ನಡೆಸಿದ್ದಾರೆ.

ಸಲ್ಮಾನ್ ಹತ್ತಿರಕ್ಕೂ ಹೋಗಲು ಬೇಡದಂತೆ ತಡೆದ ಬಾಡಿಗಾರ್ಡ್ ಗಳು ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಅಟ್ಟಿದ್ದಾರೆ.

ನಾವೇನು ಸಲ್ಮಾನ್ ಗೆ ಘೇರಾವ್ ಮಾಡಲು ಹೋಗಿರಲಿಲ್ಲ. ಅಣ್ಣಾ ಟೋಪಿ(ಗಾಂಧೀ ಟೋಪಿ) ನೀಡಲು ಹೋಗಿದ್ದೆವು. ಅಷ್ಟರಲ್ಲಿ ಅವರ ಅಂಗರಕ್ಷಕರು ನಮ್ಮನ್ನು ಹೊಡೆದರು ಎಂದು ಜನ ರಾಜ್ಯ ಪಕ್ಷದ ಕಾರ್ಯಕರ್ತ ದೀಪಕ್ ಭರತ್ ಆರೋಪಿಸಿದ್ದಾರೆ.

ಸಲ್ಮಾನ್ ಹಾಗೂ ಅವರ ಬಾಡಿಗಾರ್ಡ್ ಗಳ ಅನಾಗರೀಕ ವರ್ತನೆಗೆ ಬೇಸತ್ತು ಪೊಲೀಸರಿಗೆ ದೂರು ನೀಡಲಾಗಿದೆ. ಆ.31ರಂದು ಬಿಡುಗಡೆಯಾಗಲಿರುವ 'ಬಾಡಿಗಾರ್ಡ್' ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಸಲ್ಮಾನ್ ಗೆ ಅವರ ಬಾಡಿಗಾರ್ಡ್ ಗಳ ಬಡಿದಾಟ ಎಷ್ಟರಮಟ್ಟಿಗೆ ಲಾಭ ತರುವುದೋ ಗೊತ್ತಿಲ್ಲ.

More from Filmibeat

English summary
Salman Khan's bodyguard are allegedly pushed and beaten Anna Hazare activists. India Against Corruption supporters in Kanpur demanded Salman to support Team Anna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X