ಟರ್ಕಿ ಭೂಕಂಪದಿಂದ ಪಾರಾಗಿ ಬಂದ ಸಲ್ಮಾನ್ ಕತ್ರೀನಾ

ಮೊನ್ನೆ ಮೊನ್ನೆ ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಗೊತ್ತಿಲ್ಲದ ವಿಷಯವೂ ಒಂದಿದೆ. ಅದು ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ಭೂಕಂಪದಲ್ಲಿ ಸಿಲುಕಿಯೂ ಪಾರಾಗಿ ಬಂದಿದ್ದಾರೆ. ಟರ್ಕಿಯಲ್ಲಿ ಈ ಜೋಡಿಯ ಹಿಂದಿ ಚಿತ್ರ 'ಏಕ್ ಥಾ ಟೈಗರ್' ಶೂಟಿಂಗ್ ನಡೆದಿತ್ತು.

ಟರ್ಕಿಯಲ್ಲಿ ನಡೆದ ಈ ಭೂಕಂಪದಲ್ಲಿ 200ಕ್ಕೂ ಹೆಚ್ಚು ಜನ ಸತ್ತಿದ್ದು 1000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲಿ ಸಲ್ಮಾನ್ ಮತ್ತು ಕತ್ರಿನಾ ಶೂಟಿಂಗ್ ನಲ್ಲಿದ್ದ ಸ್ಥಳಕ್ಕೆ ಸ್ವಲ್ಪವೇ ದೂರದಲ್ಲಿದ್ದ ವ್ಯಾನ್ ಭೂಕಂಪಕ್ಕೆ ತುತ್ತಾಯಿತು. ಇವರು ನಿಂತಿದ್ದ ನೆಲ ಕುಸಿಯುವುದೊಂದೇ ಬಾಕಿ. ಅದೃಷ್ಟವಶಾತ್ ನೆಲ ಕುಸಿಯಲಿಲ್ಲ, ನಟ-ನಟಿ ಕೈಲಾಸ ಸೇರಲಿಲ್ಲ.

ಈಗಾಗಲೇ 5 ದೇಶಗಳಲ್ಲಿ ಚಿತ್ರೀಕರಣ ನಡೆಸಿರುವ ಈ ಬಾಲಿವುಡ್ ಚಿತ್ರ ಬಾಡಿಗಾರ್ಡ್ ಹಾಗೂ ದಬಾಂಗ್ ಗಿಂತ ವಿಭಿನ್ನವಾಗಿ ಬಂದಿದೆ ಎಂದು ಹೇಳಲಾಗುತ್ತಿದೆ. ಮುಂದೆ ಉತ್ತರ ಇರಾಕ್ ನಲ್ಲಿ ಚಿತ್ರೀಕರಣ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಏನೇ ಆಗಲಿ, ಚಿತ್ರತಂಡ ಸೇಫಾಗಿ ಟರ್ಕಿಯಿಂದ ಹಿಂತಿರುಗಿತಲ್ಲಾ ಎಂದು ಬಾಲಿವುಡ್ ನಿಟ್ಟುಸಿರು ಬಿಟ್ಟಿದೆ. ಜೊತೆಗೆ ಟರ್ಕಿಯಲ್ಲಿ ಮಡಿದವರಿಗಾಗಿ ಸಂತಾಪ ಸೂಚಿಸಿದೆ.

More from Filmibeat

English summary
Salman Khan and Katrina Kaif, who are in Turkey, shooting for Ek Tha Tiger are safe. More than 200 people died and 1,000 were injured in the 7.2 magnitude quake in Turkey.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X