For Quick Alerts
  ALLOW NOTIFICATIONS  
  For Daily Alerts

  ಜಂಜೀರ್ ರೀಮೇಕ್‌ಗೆ ಸನ್ನಿ ಜುಂ ಜುಂ ಮಾಯ

  By Rajendra
  |

  ವಯಸ್ಕರ ಚಿತ್ರಗಳ ಖ್ಯಾತ ತಾರೆ ಸನ್ನಿ ಲಿಯೋನ್ ಚಿತ್ರಗಳನ್ನು ನೋಡಿದರೇನೆ ಪಡ್ಡೆಗಳು ಉಕ್ಕಿರಿಬಿಕ್ಕಿರಿ ಆಗುತ್ತಾರೆ. ಇನ್ನು ಐಟಂ ಸಾಂಗ್ ಮಾಡಿದರೆ ಹೇಗಿರುತ್ತದೆ. ಊಹೆ ನಿಮಗೇ ಬಿಟ್ಟಿದ್ದು. ರಾಮ್ ಚರಣ್ ಅಭಿನಯಿಸುತ್ತಿರುವ ಹಿಂದಿಯ 'ಜಂಜೀರ್' ರೀಮೇಕ್‌ನಲ್ಲಿ ಸನ್ನಿ ಐಟಂ ಸಾಂಗ್ ಮಾಡಲಿದ್ದಾರಂತೆ.

  ಸದ್ಯಕ್ಕೆ ಆಕೆ 'ಜಿಸ್ಮ್ 2' ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸನ್ನಿಯನ್ನು ಈಗ 'ಜಂಜೀರ್' ಐಟಂ ಸಾಂಗ್‌ಗೆ ಕರೆತರುವ ಬಗ್ಗೆ ನಿರ್ಮಾಪಕರು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಸನ್ನಿಯಾಗಲಿ ಅಥವಾ 'ಜಂಜೀರ್' ಚಿತ್ರತಂಡವಾಗಲಿ ಅಧಿಕೃತ ವರದಿಯನ್ನು ಇನ್ನೂ ಪ್ರಕಟಿಸಿಲ್ಲ.

  ಈ ಹಿಂದೊಮ್ಮೆ ರಾಮ್ ಗೋಪಾಲ್ ವರ್ಮಾ ಅವರ 'ಡಿಪಾರ್ಟ್‌ಮೆಂಟ್' ಚಿತ್ರದಲ್ಲಿ ಸನ್ನಿ ಐಟಂ ಹಾಡು ಮಾಡುತ್ತಾರೆ ಎಂಬ ಪುಕಾರು ಊರೆಲ್ಲಾ ಹಬ್ಬಿತ್ತು. ಬಳಿಕ ಈ ಸುದ್ದಿಯನ್ನು ಸನ್ನಿ ನಯವಾಗಿ ನಿರಾಕರಿಸಿದ್ದರು. ಒಟ್ಟಿನಲ್ಲಿ ಸನ್ನಿಗೆ ಮೇಲಿಂದ ಮೇಲೆ ಐಟಂ ಹಾಡುಗಳಿಗೆ ಬೇಡಿಕೆ ಬರುತ್ತಲೇ ಇದೆ. ಆಕೆ ಇನ್ನೂ ಯಾವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. (ಏಜೆನ್ಸೀಸ್)

  English summary
  The adult film actress Sunny Leone has proved that dreams can turn reality with back breaking hard work. She is the unique example of a western beauty, slowly and gradually making it big in the tinselville. After Jism 2 and Ragini MMS 2, Sunny might soon turn an item girl for the Zanjeer remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X