twitter
    For Quick Alerts
    ALLOW NOTIFICATIONS  
    For Daily Alerts

    ಪವರ್ ಆಫ್ 'ಪಠಾಣ್': ಮುಚ್ಚಿದ್ದ ಚಿತ್ರಮಂದಿರಗಳು ಮತ್ತೆ ಪ್ರಾರಂಭ!

    By ಫಿಲ್ಮಿಬೀಟ್ ಡೆಸ್ಕ್
    |

    ಒಂದು ಸೂಪರ್ ಹಿಟ್ ಸಿನಿಮಾ ಇಡೀ ಚಿತ್ರರಂಗಕ್ಕೆ ನವ ಚೈತನ್ಯ ತುಂಬಿಬಿಡುತ್ತದೆ. ಇದೀಗ ಬಡವಾಗಿರುವ ಬಾಲಿವುಡ್‌ಗೆ ಅಂಥಹುದೇ ಚೈತನ್ಯವನ್ನು ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ನೀಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

    ಕೋವಿಡ್‌ ಹೊಡೆತ ಆ ನಂತರ ಕಂಟೆಂಟ್ ಕೊರತೆಯಿಂದ ಬಾಲಿವುಡ್ ನಿರ್ಮಿಸಿದ ಕಳಪೆ ಸಿನಿಮಾಗಳು, ಫ್ಲಾಪ್ ಸಿನಿಮಾಗಳಿಂದ ಬೇಸತ್ತು ಉತ್ತರ ಭಾರತದ ಕೆಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಆದರೀಗ ಅವರು ಮತ್ತೆ ತೆರೆಯುತ್ತಿವೆ!

    ನಟ ಚಿಯಾನ್ ವಿಕ್ರಂಗೆ ಕೋವಿಡ್‌ ಪಾಸಿಟಿವ್ನಟ ಚಿಯಾನ್ ವಿಕ್ರಂಗೆ ಕೋವಿಡ್‌ ಪಾಸಿಟಿವ್

    ಹೌದು, ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಬಿಡುಗಡೆ ಆಗುತ್ತಿದ್ದು, ಶಾರುಖ್ ಖಾನ್ ಸಿನಿಮಾವನ್ನು ಸ್ವಾಗತಿಸಲೆಂದೇ ಮುಚ್ಚಿದ್ದ ಕೆಲವು ಚಿತ್ರಮಂದಿರಗಳು ಪುನಃ ತೆರೆಯುತ್ತಿವೆ. ಶಾರುಖ್ ಖಾನ್‌ರ 'ಪಠಾಣ್' ಸಿನಿಮಾ ಬಡವಾಗಿದ್ದ ಚಿತ್ರಮಂದಿರಗಳಿಗೆ ಮರುಜೀವ ತುಂಬುವ ವಿಶ್ವಾಸದಿಂದಲೇ ಈ ಬೆಳವಣಿಗೆ ಉಂಟಾಗಿದೆ.

    25 Theaters Re Opening For Shah Rukh Khans Pathaan Movie

    ಸಿನಿಮಾ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಮುಚ್ಚಿಹೋಗಿದ್ದ ಸುಮಾರು 25 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 'ಪಠಾಣ್' ಸಿನಿಮಾ ಪ್ರದರ್ಶನಕ್ಕಾಗಿ ಮತ್ತೆ ಆರಂಭವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಒಳ್ಳೆಯ ಹಿಟ್ ಸಿನಿಮಾಗಳಿಲ್ಲದೆ ಬಸವಳಿದಿದ್ದ ಉತ್ತರ ಭಾರತದ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 'ಪಠಾಣ್' ಕಮಾಲ್ ಮಾಡುವ ನಿರೀಕ್ಷೆಯಲ್ಲಿವೆ. ಈಗಾಗಲೇ ಅದ್ಭುತವಾದ ಅಡ್ವಾನ್ಸ್ ಬುಕಿಂಗ್ ನಡೆಯುತ್ತಿದ್ದು, ಸಿನಿಮಾ ಸಹ ಸೂಪರ್ ಹಿಟ್ ಆಗುವ ನಿರೀಕ್ಷೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

    2015 ರಿಂದಲೂ ಶಾರುಖ್ ಖಾನ್‌ಗೆ ದೊಡ್ಡ ಗೆಲುವು ಸಿಕ್ಕಿಲ್ಲ. 2018 ರ ಬಳಿಕವಂತೂ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಯಾವ ಸಿನಿಮಾ ಬಿಡುಗಡೆ ಸಹ ಆಗಿಲ್ಲ. ಐದು ವರ್ಷಗಳ ಬಳಿಕ ಶಾರುಖ್ ಖಾನ್ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ.

    100 ಕ್ಕೂ ಹೆಚ್ಚು ದೇಶಗಳಲ್ಲಿ 'ಪಠಾಣ್' ಸಿನಿಮಾ ಬಿಡುಗಡೆ ಆಗಲಿದ್ದು, ವಿದೇಶಗಳಲ್ಲಿಯೂ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿದೆಯೆಂದು ಸಿನಿಮಾ ವಾಣಿಜ್ಯ ವಿಶ್ಲೇಷಕರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾವು ಜನವರಿ 25 ರಂದು ತೆರೆಗೆ ಬರಲಿದೆ.

    'ಪಠಾಣ್' ಸಿನಿಮಾ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಜಾನ್ ಅಬ್ರಹಾಂ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಯಶ್‌ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದೆ.

    English summary
    25 theaters re opening for Shah Rukh Khan's Pathaan movie. Movie is releasing on January 25.
    Tuesday, January 24, 2023, 16:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X