For Quick Alerts
  ALLOW NOTIFICATIONS  
  For Daily Alerts

  ವೀರ್ಯದಾನ ಕಥೆಯ ವಿಕ್ಕಿ ಡೋನರ್ ನಾಗಾಲೋಟ

  |

  ಈರೋಸ್ ಇಂಟರ್ ನ್ಯಾಷನಲ್ ಮೀಡಿಯಾ ಲಿ., ವಿಕ್ಕಿ ಡೋನರ್ ಚಿತ್ರದ ಪ್ರಾರಂಭಿಕ ವಾರಾಂತ್ಯದ ಗಳಿಕೆಯನ್ನು ಬಹಿರಂಗಪಡಿಸಿದೆ. ಸುದ್ದಿ ಮೂಲಗಳ ಪ್ರಕಾರ, ಪ್ರಪಂಚದಾದ್ಯಂತ ವಿಕ್ಕಿ ಡೋನರ್ ಚಿತ್ರದ ಈವರೆಗಿನ ಗಳಿಕೆ ರು. 13.40 ಕೋಟಿ. ಇದರಲ್ಲಿ ಭಾರತದ ಗಳಿಕೆ ರು. 11.40 ಕೋಟಿ (7.93 ನಿವ್ವಳ ಗಳಿಕೆ), ಹಾಗೂ ಭಾರತ ಬಿಟ್ಟು ಹೊರಗಿನ ಗಳಿಕೆ ರು.

  2 ಕೋಟಿ ಸೇರಿದೆ.

  ಈ ತಿಂಗಳು 20 ರಂದು (20 ಏಪ್ರಿಲ್ 2012) ಪ್ರಪಂಚದಾದ್ಯಂತ 600 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ ನಿರ್ಮಾಣ ಹಾಗೂ ಅಯುಷ್ಮಾನ್ ಖುರಾನಾ ಹಾಗೂ ಯಾಮಿ ಗೌತಮ್ ಜೋಡಿ ನಟನೆಯ ವಿಕ್ಕಿ ಡೋನರ್ ಸಾಕಷ್ಟು ಪ್ರಶಂಸೆ ಗಳಿಸಿದೆ. ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಸದ್ದುಮಾಡುತ್ತಿದೆ.

  ವೀರ್ಯದಾನಕ್ಕೆ ಸಂಬಂಧಪಟ್ಟ ಕಥೆ ಹೊಂದಿರುವ ವಿಕ್ಕಿ ಡೋನರ್ ಚಿತ್ರ, ಬಿಡುಗಡೆಗೆ ಮೊದಲು ವಿವಾದ ಸೃಷ್ಟಿಸಬಹುದು ಎನ್ನಲಾಗಿತ್ತು. ಆದರೆ ಬಿಡುಗಡೆ ನಂತರ ಚಿತ್ರ ವಿಮರ್ಶಕರು ಹಾಗೂ ಪ್ರೇಕ್ಷಕರು ಹೀಗೆ ಎಲ್ಲರಿಗೂ ಇಷ್ಟವಾಗಿದ್ದು ಯಾವುದೇ ರೀತಿಯ ವಿವಾದಕ್ಕೆ ಆಸ್ಪದ ನೀಡಿಲ್ಲ. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಬಾಲಿವುಡ್ ಸುಂದರಾಂಗ ಜಾನ್ ಅಬ್ರಹಾಂ ಖುಷಿಯಾಗಿದ್ದಾರೆ. (ಏಜೆನ್ಸೀಸ್)

  English summary
  Eros International Media Ltd has announced an opening weekend collection of Rs. 13.40 crore worldwide Box Office for Vicky Donor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X