For Quick Alerts
  ALLOW NOTIFICATIONS  
  For Daily Alerts

  'ಹಮ್ ಆಪ್ಕೆ ಹೈ ಕೌನ್' ಸಿಲ್ವರ್ ಜೂಬ್ಲಿ ಸಂಭ್ರಮದಲ್ಲಿ ಮಾಧುರಿ ದೀಕ್ಷಿತ್

  |

  ನಟಿ ಮಾಧುರಿ ದೀಕ್ಷಿತ್ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಅವರ ಖುಷಿಗೆ ಕಾರಣ ಆಗಿರುವುದು 'ಹಮ್ ಆಪ್ಕೆ ಹೈ ಕೌನ್' ಸಿನಿಮಾ.

  ಬಾಲಿವುಡ್ ನಲ್ಲಿ ಬಂದ ಬ್ಯೂಟಿಫುಲ್ ಸಿನಿಮಾಗಳ ಪೈಕಿ 'ಹಮ್ ಆಪ್ಕೆ ಹೈ ಕೌನ್' ಕೂಡ ಒಂದು. ಆ ಸಿನಿಮಾದ ಹಾಡುಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಇದೆ. ಭಾರತದ ಮದುವೆಯ ಸಂಭ್ರಮವನ್ನು ಈ ಹಾಡುಗಳು ಮತ್ತಷ್ಟು ಹೆಚ್ಚು ಮಾಡಿತ್ತು.

  'ಸಂಜು' ಚಿತ್ರದಲ್ಲಿನ ಸೀನ್ ಡಿಲೀಟ್ ಮಾಡುವಂತೆ ಒತ್ತಾಯ ಮಾಡಿದ್ರಾ ಮಾಧುರಿ.? 'ಸಂಜು' ಚಿತ್ರದಲ್ಲಿನ ಸೀನ್ ಡಿಲೀಟ್ ಮಾಡುವಂತೆ ಒತ್ತಾಯ ಮಾಡಿದ್ರಾ ಮಾಧುರಿ.?

  ಇಂತಹ ಸಿನಿಮಾ ಈಗ ಸಿಲ್ವರ್ ಜೂಬ್ಲಿ ಸಂಭ್ರಮದಲ್ಲಿ ಇದೆ. 'ಹಮ್ ಆಪ್ಕೆ ಹೈ ಕೌನ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ 25 ವರ್ಷಗಳು ಕಳೆದಿವೆ. ಈ ವಿಶೇಷ ದಿನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಮಾಧುರಿ ದೀಕ್ಷಿತ್ ಸಂಭ್ರಮ ಹಂಚಿಕೊಂಡಿದ್ದಾರೆ.

  ''ಹಾಯ್ ನಾನು ನಿಮ್ಮ ನಿಶಾ.. 'ಹಮ್ ಆಪ್ಕೆ ಹೈ ಕೌನ್' 25 ವರ್ಷದ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದೇನೆ.'' ಎಂದು ಒಂದು ವಿಡಿಯೋ ಮಾಡಿದ್ದಾರೆ. ಚಿತ್ರದ ತಮ್ಮ ಪಾತ್ರದ ಹೆಸರಿನ ಮೂಲಕವೇ ಮಾತನಾಡಿದ್ದಾರೆ.

  'ಹಮ್ ಆಪ್ಕೆ ಹೈ ಕೌನ್' ಚಿತ್ರ ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್, ಮೊಹ್ನೀಶ್ ಬಹ್ಲ್, ರೇಣುಕಾ ಶಹಾನೆ ಸಿನಿಮಾದಲ್ಲಿ ನಟಿಸಿದ್ದರು. ಸೂರಜ್ ಬರ್ಜತ್ಯ ಚಿತ್ರದ ನಿರ್ದೇಶನ ಮಾಡಿದ್ದರು. ರಾಮ್ ಲಕ್ಷಣ್ ಸಂಗೀತ ನೀಡದ್ದಾರೆ.

  1994 ಆಗಸ್ಟ್ 5 ರಂದು ಬಿಡುಗಡೆಯಾದ 'ಹಮ್ ಆಪ್ಕೆ ಹೈ ಕೌನ್' ಸಿನಿಮಾ ಬರೋಬ್ಬರಿ ನೂರು ವಾರಗಳ ಕಾಲ ಪ್ರದರ್ಶನ ಆಗಿತ್ತು. ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದೊಡ್ಡ ದಾಖಲೆಯನ್ನು ಈ ಸಿನಿಮಾ ಮಾಡಿತ್ತು.

  English summary
  25 years for Madhuri Dixi's Hum Apke Hai Kon movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X