For Quick Alerts
  ALLOW NOTIFICATIONS  
  For Daily Alerts

  'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಲಂಡನ್ ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣ

  |

  'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ನಿರ್ಮಿಸಿದ ಸಿನಿಮಾ. ಈ ಹೆಸರು ಹೇಳುತ್ತಿದ್ದ ಹಾಗೆ ಶಾರುಖ್ ಖಾನ್ ಮತ್ತು ಕಾಜೋಲ್ ಕಣ್ಮುಂದೆ ಬರ್ತಾರೆ. ಶಾರುಖ್ ಮತ್ತು ಕಾಜೋಲ್ ಸಿನಿಮಾ ಬದುಕಿಗೆ ದೊಡ್ಡ ತಿರುವುಕೊಟ್ಟ ಸಿನಿಮಾವಿದು. ಈ ಸಿನಿಮಾ ಬಳಿಕ ಶಾರುಖ್ ಮತ್ತು ಕಾಜೋಲ್ ಜೋಡಿ ಬಾಲಿವುಡ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಜೋಡಿಯಾಗಿ ಹೊರಹೊಮ್ಮಿತು.

  ಯುವರಾಜ್ ಮತ್ತು ಸಿಮ್ರಾನ್ ಪಾತ್ರದಲ್ಲಿ ಶಾರುಖ್ ಮತ್ತು ಕಾಜೋಲ್ ಮಿಂಚಿದ್ದರು. ಈ ಸಿನಿಮಾವನ್ನು ಭಾರತದಲ್ಲಿ ಅಪ್ರತಿಮ ಪ್ರೇಮಕಥೆ ಎಂದೇ ಕರೆಯಲಾಗುತ್ತೆ. ಅಂದ್ಹಾಗೆ ಈ ಎವರ್ ಗ್ರೀನ್ ಸಿನಿಮಾ ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸುತ್ತಿದೆ. 1995 ಅಕ್ಟೋಬರ್ 20ಕ್ಕೆ ಈ ಸಿನಿಮಾ ರಿಲೀಸ್ ಆಗಿತ್ತು. 25ನೇ ವರ್ಷದ ಸಂಭ್ರಮದಲ್ಲಿ ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡುವ ನಿರ್ಧಾರ ಮಾಡಲಾಗಿದೆ. ಜೊತೆಗೆ ಈ ಸಿನಿಮಾದ ನೆನಪಿಗಾಗಿ ಶಾರುಖ್ ಖಾನ್ ಮತ್ತು ಕಾಜೋಲ್ ಕಂಚಿನ ಪ್ರತಿಮೆ ಅನಾವರಣವಾಗುತ್ತಿದೆ. ಮುಂದೆ ಓದಿ....

  'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ರೀ ರಿಲೀಸ್ ಆಗುತ್ತಿದೆ ಶಾರುಖ್-ಕಾಜೋಲ್ ಸಿನಿಮಾ

  20 ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ ಸಿನಿಮಾ

  20 ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ ಸಿನಿಮಾ

  ಅಂದ್ಹಾಗೆ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ 1995ರಿಂದ ಸತತ 20 ವರ್ಷಗಳ ಕಾಲ ಮುಂಬೈನ ಮರಾಠ ಮಂದಿರ್ ನಲ್ಲಿ ಪ್ರಸಾರವಾಗುತ್ತಿತ್ತು. 2015ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಕೊನೆಯ ಪ್ರದರ್ಶನದ ವೇಳೆ 210 ಪ್ರೇಕ್ಷಕರಿದ್ದರು. ಭಾರತೀಯರು ಮಾತ್ರವಲ್ಲದೆ ವಿದೇಶದಿಂದನೂ ಜನ ಬಂದು ಈ ಸಿನಿಮಾ ವೀಕ್ಷಿಸುತ್ತಿದ್ದರಂತೆ. ಕ್ರಮೇಣ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದ ಕಾರಣ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ. ಭಾರತೀಯ ಸಿನಿಮಾರಂಗದಲ್ಲೇ ಸತತ 20 ವರ್ಷ ಪ್ರದರ್ಶನ ಕಂಡ ಏಕೈಕ ಸಿನಿಮಾ ಎಂಬ ದಾಖಲೆ ನಿರ್ಮಿಸಿದೆ.

  ಲಂಡನ್ ನಲ್ಲಿ ಕಂಚಿನ ಪ್ರತಿಮೆ ಅನಾವರಣ

  ಲಂಡನ್ ನಲ್ಲಿ ಕಂಚಿನ ಪ್ರತಿಮೆ ಅನಾವರಣ

  DDLJ ಸಿನಿಮಾದ 25ನೇ ವರ್ಷದ ಸಂಭ್ರಮದ ಸಮಯದಲ್ಲಿ, ಲಂಡನ್ ನ ಪ್ರಸಿದ್ಧ ಸಿನಿಮಾ ಪ್ರತಿಮೆಗಳ ಹೃದಯಭಾಗ ಲೀಸೆಸ್ಟರ್ ಸ್ಕೈರ್ ನಲ್ಲಿರವ 'ಸೀನ್ಸ್ ಇನ್ ದಿ ಸ್ಕೈರ್' ನಲ್ಲಿ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ ಶಾರುಖ್ ಖಾನ್ ಮತ್ತು ಕಾಜೋಲ್ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಇದು 25ನೇ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ವಿಶ್ವದ ಪ್ರಸಿದ್ಧ ಸಿನಿಮಾಗಳ ಸಾಕಷ್ಟು ಪ್ರತಿಮೆಗಳಿವೆ. ಅವುಗಳಲ್ಲಿ ಈಗ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ ಪ್ರತಿಮೆ ಕೂಡ ಒಂದು.

  ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರ ಬಹಿರಂಗ

  ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ DDLJ

  ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ DDLJ

  'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಆದರೆ ಭಾರತದಲ್ಲಿ ಅಲ್ಲ. ಬದಲಿಕೆ ಸ್ಪೇನ್ ನಲ್ಲಿ ರೀ ರಿಲೀಸ್ ಆಗುತ್ತಿದೆ. ಮನಿ ಹೀಸ್ಟ್ ಸಿನಿಮಾದ ನಾಯಕ ಅಜಯ್ ಜೇಥಿ ಈ ಸಿನಿಮಾವನ್ನು ಸ್ಪೇನ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಜಯ್ ನಟನಾಗಿ ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳ ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ.

  ಅಕ್ಟೋಬರ್ 30ಕ್ಕೆ ಸಿನಿಮಾ ರೀ ರಿಲೀಸ್

  ಅಕ್ಟೋಬರ್ 30ಕ್ಕೆ ಸಿನಿಮಾ ರೀ ರಿಲೀಸ್

  ಅಕ್ಟೋಬರ್ 30ರಂದು ಈ ರೀ ರಿಲೀಸ್ ಆಗುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ಓಪನ್ ಆಗುತ್ತಿವೆ. ಈಗಾಗಲೇ ಅನೇಕ ದೇಶಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದೀಗ ಲಾಕ್ ಡೌನ್ ಬಳಿಕ ಸ್ಪೇನ್ ನಲ್ಲಿ ತೆರೆ ಕಾಣುತ್ತಿರುವ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada
  ಸಿನಿಮಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ

  ಸಿನಿಮಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ

  ಸಿನಿಮಾ ರೀ ರಿಲೀಸ್ ಬಗ್ಗೆ ಪೋಸ್ಟ್ ಹಂಚಿಕೊಂಡ ಬಳಿಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಎಲ್ಲಿ ರಿಲೀಸ್ ಆಗಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಿಜಕ್ಕೂ ಶಾರುಖ್ ಮತ್ತು ಕಾಜೋಲ್ ಅವರನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ ಎಂದು ನಟ ಮತ್ತು ವಿತರಕ ಅಜಯ್ ಜೇಥಿ ಹೇಳಿದ್ದಾರೆ.

  English summary
  25th Anniversary of DDLJ: Bronze Statue of Shah Rukh Khan and Kajol to Be Unveiled at Leicester Square.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X