ಬಾಲು ಹಿಡಿಯಲು ಹೋಗಿ ಅಭಿಷೇಕ್ ಬೆರಳಿಗೆ ಪೆಟ್ಟು

By Rajendra

ನಟ ಅಭಿಷೇಕ್ ಬಚ್ಚನ್‌ಗೆ ಯಾಕೋ ಏನೋ ಟೈಮೇ ಸರಿಯಿದ್ದಂಗಿಲ್ಲ ಅನ್ನಿಸುತ್ತದೆ. ತನ್ನ ಪತ್ನಿ ಐಶ್ವರ್ಯ ರೈ ಹಾಗೂ ಮಗುವಿನ ಧ್ಯಾನದಲ್ಲೇ ಕಾಲ ಕಳೆಯುತ್ತಿರುವಂತಿದೆ. ಮೊನ್ನೆ ತಾನೆ ಚಿತ್ರೀಕರಣದಲ್ಲಿ ಗಾಯಗೊಂಡಿದ್ದ ಅಭಿ ಈಗ ಮತ್ತೊಮ್ಮೆ ಕೈಗೆ ಬೆರಳಿಗೆ ಗಾಯ ಮಾಡಿಕೊಂಡಿದ್ದಾನೆ. ಅದೂ ಬಾಲು ಹಿಡಿಯಲು ಹೋಗಿ.

'ಬೋಲ್ ಬಚ್ಚನ್ ಬೋಲ್' ಚಿತ್ರತಂಡ ಕ್ರಿಕೆಟ್ ಆಡುತ್ತಿತ್ತಂತೆ. ಚಿತ್ರತಂಡದ ಒಬ್ಬ ಬಿಡುಬೀಸಾಗಿ ಬಾರಿಸಿದ ಬಾಲು ಅಭಿಯತ್ತ ಬಂದಿದೆ. ಅದನ್ನು ಹಿಡಿಯಲು ಹೋಗಿ ಬೆರಳು ಘಾಸಿ ಮಾಡಿಕೊಂಡಿದ್ದಾನೆ ಪುಣ್ಯಾತ್ಮ. ಅದೇ ಫೋಟೋವನ್ನು ನೀವಿಲ್ಲಿ ನೋಡುತ್ತಿರುವುದು.

ಎಡಗೈನ ಬೆರಳು ಬೇರೆ ಮುರಿದಿರುವ ಕಾರಣ ನಿತ್ಯಕರ್ಮಗಳನ್ನು ಹೇಗೆ ಮ್ಯಾನೇಜ್ ಮಾಡೋದೋ ಏನೋ ಎಂಬ ಸಮಸ್ಯೆ ಅಭಿಗೆ ಎದುರಾಗಿದೆ. ಒಂದು ತಿಂಗಳ ಹಿಂದಷ್ಟೇ ಕಣ್ಣಿನ ಕೆಳಭಾಗದಲ್ಲಿ ಗಾಯ ಮಾಡಿಕೊಂಡಿದ್ದರು ಅಭಿಷೇಕ್. ತಮ್ಮ ಬೆರಳಿಗಾದ ಗಾಯದ ಫೋಟೋವನ್ನು ಟ್ವಿಟ್ಟರ್‌ ಖಾತೆಯಲ್ಲೂ ಹಾಕಿಕೊಂಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Abhishek Bachchan has injured his ring finger on his left hand leading to a hairline fracture on his finger. While Abhishek Bachchan was returning to his hotel room after shooting for the Rohit Shetty film Bol Bachchan Bol, the crew who were playing cricket hit a ball in his direction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X