ರೆಡ್ಡಿ ಫ್ಯಾಮಿಲಿ ಮೇಲೆ ನಟಿ ಸಮೀರಾಗೆ ಎಲ್ಲಿಲ್ಲದ ಅಕ್ಕರೆ!

By Rajendra

ತನ್ನ ಹೆಸರಿನ ಮುಂದೆ ರೆಡ್ಡಿ ಎಂದು ಸೇರಿಸಿಕೊಂಡಿರುವ ಬಾಲಿವುಡ್ ತಾರೆ ಸಮೀರಾ ರೆಡ್ಡಿಗೆ 'ರೆಡ್ಡಿ' ಎಂದರೆ ಬಹಳ ಇಷ್ಟವಂತೆ. ಯಾವ ರೆಡ್ಡಿ ಎಂದು ಕೇಳಿದಿರಾ? ಜನಾರ್ದನರೆಡ್ಡಿ, ವಿಕೃತಕಾಮಿ ಉಮೇಶ್ ರೆಡ್ಡಿ ಅವರಂತೂ ಅಲ್ಲವೇ ಅಲ್ಲ. ಅದೇ ರೀ ಫ್ಯಾಮಿಲಿ ನೇಮ್ ರೆಡ್ಡಿ.

ನಿಮ್ಮ ಹೆಸರಿನೊಂದಿಗೆ ಹೀಗೆ ರೆಡ್ಡಿ ಸೇರಿಸಿಕೊಂಡಿದ್ದು ಸರಿಯೇ ಎಂದು ಕೇಳಿದರೆ ಅದಕ್ಕೆ ಸಮೀರಾ ಕೊಟ್ಟ ಉತ್ತರವೇನು ಗೊತ್ತೆ? ಅದರಲ್ಲೇನು ತಪ್ಪು. ರೆಡ್ಡಿ ಎಂಬುದು ನಮ್ಮ ಫ್ಯಾಮಿಲಿ ನೇಮ್. ಎಲ್ಲ ಚಿತ್ರಗಳಲ್ಲೂ ತಮ್ಮ ಹೆಸರು ಸಮೀರಾ ರೆಡ್ಡಿ ಎಂದು ಬಂದರೇನೆ ಸಮಾಧಾನ ಎಂದಿದ್ದಾರೆ.

ಆದರೆ ಕಲಾವಿದರ ಹೆಸರಿನ ಮುಂದೆ ಜಾತಿ ಸೂಚಕ ಪದಗಳು ಇರಬಾರದು ಎಂಬುದು ನಿರ್ಮಾಪಕರ ಸಂಘದ ಅಲಿಖಿತ ಕಾನೂನು. ಆದರೆ ಖಾನ್‌ಗಳು, ಕಪೂರ್‌ಗಳು ತಮ್ಮ ಹೆಸರಿನೊಂದಿಗಿನ ಫ್ಯಾಮಿಲಿ ನೇಮ್ ಕಿತ್ತಾಕಲಿ ನೋಡೋಣ ಎನ್ನುತ್ತಾರೆ ಸಮೀರಾ.

ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಮತ್ತೊಂದು ನ್ಯಾಯ ಬೇಡ. ತಮ್ಮ ಹೆಸರಿನೊಂದಿಗೆ ರೆಡ್ಡಿ ಸೇರಿಸಿಕೊಂಡರೆ ಕೆಟ್ಟ ಪರಿಣಾಮವೇನು ಆಗದು ಎಂದಿದ್ದಾರೆ. ಇನ್ನು ಸಮೀರಾ ರೆಡ್ಡಿಗೆ ಕನ್ನಡದಲ್ಲೂ ಬಣ್ಣ ಹಚ್ಚಿಕೊಳ್ಳುವ ಬೆಟ್ಟದಷ್ಟು ಆಸೆಯಿದೆ. ಅದು ಯಾವಾಗ ನೆರವೇರುತ್ತೋ ಏನೋ? (ಏಜೆನ್ಸೀಸ್)

More from Filmibeat

English summary
Actress Sameera Reddy, who is well known as Sexy Sam of Indian film industry, likes the word 'Reddy' to suffixed to her name. The Bollywood star says that her name shows family of Reddys and she proud of her community.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X