ಪೃಷ್ಠಕ್ಕೆ ವಿಮೆ ಮಾಡಿಸಲಿರುವ ಮಿನಿಶಾ ಲಾಂಬಾ
ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ ನಟ ಜಾನ್ ಅಬ್ರಹಾಂ ತಮ್ಮ ಪೃಷ್ಠಕ್ಕೆ ವಿಮೆ ಮಾಡಿಸಲು ಮುಂದಾಗಿದ್ದರು. ವಿಮೆಯ ಮೊತ್ತ ರು.10 ಕೋಟಿಯಾದ ಕಾರಣ ಭಾರತೀಯ ಜೀವ ವಿಮಾ ಕಂಪನಿಗಳು ಸ್ವಲ್ಪ ಹಿಂದೇಟು ಹಾಕಿದವು. ತನ್ನ ಸರದಿಯೆಂಬಂತೆ ಈಗ ಬಾಲಿವುಡ್ ನಟಿ ಮಿನಿಶಾ ಲಾಂಬಾ ತಮ್ಮ ಸುಂದರ ಪೃಷ್ಠಗಳಿಗೆ ವಿಮೆ ಮಾಡಿಸಲು ಹೊರಟಿದ್ದಾರೆ!
"ಅಂದವಾದ ಪೃಷ್ಠದಿಂದಲೇ ನನ್ನ ಸೌಂದರ್ಯನ್ನು ಗುರುತಿಸುತ್ತಿದ್ದಾರೆ. ಹಾಗಾಗಿ ಆ ಭಾಗಕ್ಕೆ ವಿಮೆ ಮಾಡಿಸಬೇಕೆಂದಿದ್ದೇನೆ" ಎನ್ನುತ್ತಾರೆ ಹರ್ಯಾಣದ ಸುಂದರಿ ಮಿನಿಶಾ. ನನ್ನ ದೇಹದ ನಿಜವಾದ ಆಸ್ತಿ ಎಂದರೆ ನನ್ನ ಪೃಷ್ಠಗಳೆ. ಅವುಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ. ಹಾಗಾಗಿ ವಿಮೆಗೆ ಮೊರೆಹೋಗುತ್ತಿದ್ದೇನೆ ಎನ್ನುತ್ತಾರೆ. ಅದರಲ್ಲೇನು ತಪ್ಪಿಲ್ಲ ಬಿಡಿ, ಹೆಣ್ಣಿನ ಎದ್ದು ತೋರುವ ಭಾಗದ ಕಡೆಗೆ ಗಂಡಿನ ಲಕ್ಷ್ಯ ಸದಾ ಇರುತ್ತದೆ ಎನ್ನುವುದು ಅನುಭವಿಗಳ ಮಾತು.
ದೇಹದ ಉಳಿದ ಎಲ್ಲ ಅಂಗಗಳನ್ನು ಬಿಟ್ಟು ಎಲ್ಲರೂ ಯಾಕೆ ಪೃಷ್ಠಕ್ಕೆ ಇಷ್ಟು ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂಬ ಗುಮಾನಿ ಸದ್ಯಕ್ಕೆ ಬಾಲಿವುಡ್ ಚಿತ್ರರಂಗದಲ್ಲಿ ಕಾಡುತ್ತಿದೆ. ಏನೇ ಆಗಲಿ ಮಿನಿಶಾ ಲಾಂಬಾ ಪೃಷ್ಠಕ್ಕೆ ವಿಮೆ ಕೊಡುವ ಕಂಪನಿಗೆ ಬೆಸ್ಟ್ ಆಫ್ ಲಕ್ ಹೇಳಿಬಿಡೋಣ!


Click it and Unblock the Notifications











