ಬಾಲಿವುಡ್ ಚಿತ್ರಕ್ಕೆ ಆಹಾರವಾದ ಲೋಕಾಯುಕ್ತ ಹೆಗ್ಡೆ

ಬಾಲಿವುಡ್‌ನ ಸೃಜನಶೀಲ ನಿರ್ದೇಶಕ ದೀಪಂಕರ್ ಬ್ಯಾನರ್ಜಿ 'ಜಸ್ಟೀಸ್ ಹೆಗ್ಡೆ" ಎಂಬ ಪೊಲಿಟಿಕಲ್ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಅಕ್ರಮ ಗಣಿಗಾರಿಕೆ ವರದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ.
ಧರ್ಮೇಂದ್ರ ಅವರ ಪ್ರತಿಭಾವಂತ ನಟ ಅಭಯ್ ಡಿಯೋಲ್ ಅವರು ಸಂತೋಷ್ ಹೆಗ್ಡೆ ಪಾತ್ರವನ್ನು ಮಾಡಲಿದ್ದಾರೆ. ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಕರ್ನಾಟಕದಲ್ಲಷ್ಟೇ ಅಲ್ಲ ಉತ್ತರ ಭಾರತದಲ್ಲೂ ಹೆಸರುವಾಸಿ.
ಸುಪ್ರೀಂ ಕೋರ್ಟ್‌ನ ನಿವೃತ್ತ ಜಡ್ಜ್ ಆಗಿರುವ ಹೆಗ್ಡೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ವೇದಿಕೆ ಯಲ್ಲೂ ಕಾಣಿಸಿಕೊಂಡು ಕೇಂದ್ರ ಸರ್ಕಾರಕ್ಕೂ ಚುರುಕು ಮುಟ್ಟಿಸಿದ್ದಾರೆ ಎಂದು ಬ್ಯಾನರ್ಜಿ ಹೇಳುತ್ತಾರೆ.
ಜಿಂದಗಿ ನಾ ಮಿಲೇ ದುಬಾರ ಚಿತ್ರದ ಅಭಿನಯಕ್ಕೆ ಉತ್ತಮ ಅಂಕ ಪಡೆದಿರುವ ಅಭಯ್, ಈ ಚಿತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ನಾನು ಹೆಗ್ಡೆ ಅವರನ್ನು ಮೊದಲೇ ನೋಡಿದ್ದರೆ ಚೆನ್ನಾಗಿತ್ತು ಅನ್ನಿಸುತ್ತಿದೆ. ನೋಡಿದ್ದರೆ ಅವರ ಮ್ಯಾನರಿಸಂ ಸ್ವಲ್ಪ ಕಾಪಿ ಮಾಡ್ಬಹುದ್ದಿತ್ತು.
ನನ್ನ ನಿಜ ಜೀವನದ ಜೀವನ ಶೈಲಿಗೂ ಹೆಗ್ಡೆ ಅವರ ಬಗ್ಗೆ ನಾನು ತಿಳಿದುಕೊಂಡಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದು ತುಂಬಾ ಚಾಲೆಜಿಂಗ್ ಆಗಿದೆ ಎಂದು 34 ವರ್ಷದ ನಟ ಅಭಯ್ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











