ಸ್ಟೆಪ್ ಅಪ್ ಹಾಟ್ ಡ್ಯಾನ್ಸರ್ ಜೊತೆ ಪ್ರಭು ಕುಣಿತ

ಭಾರತದ ಮೈಕಲ್ ಚಾಕ್ಸನ್ ಪ್ರಭುದೇವ ಹಾಗೂ ಡೊಳ್ಳು ಹೊಟ್ಟೆಯ ಅದ್ಭುತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಹಾಲಿವುಡ್ ತಾರೆಯರು ಕುಣಿಯಲಿದ್ದಾರೆ.
ಸ್ಟೆಪ್ ಅಪ್ ಚಿತ್ರದ ಡ್ಯಾನ್ಸ್ ಭಂಗಿಗಳಿಗೆ ಭಾರತದ ಯುವ ಪೀಳಿಗೆ ಮಾರುಹೋಗಿರುವುದನ್ನು ಚೆನ್ನಾಗಿ ಅರಿತ ಮತ್ತೊಬ್ಬ ನೃತ್ಯ ಸಂಯೋಜಕ ರೆಮೋ ಈಗ ಈ ಎಲ್ಲಾ ಪ್ರತಿಭಾವಂತರನ್ನು ಒಟ್ಟಿಗೆ ಸೇರಿಸಿಕೊಂಡು ಸಿನಿಮಾ ಮಾಡುತ್ತಿದ್ದಾನೆ.
ಹಾಗಂತ, ಸಿನಿಮಾದಲ್ಲಿ ಬರೀ ಹಾಡು, ಡ್ಯಾನ್ಸ್ ಮಾತ್ರವಲ್ಲ ರೋಮ್ಯಾನ್ಸ್ ಕೂಡಾ ಇರುತ್ತದಂತೆ. ಮೊದಲ ಚಿತ್ರ F.A.L.T.U ದಲ್ಲಿ ಕ್ಯಾಂಪಸ್ ಕಥೆ ಹೇಳಿದ ರೆಮೋ ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪ್ರಭುಗೆ ಹೊಸ ಚಾಲೆಂಜ್ : ಸದ್ಯ ರೌಡಿ ರಾಥೋರ್ ಚಿತ್ರ ನಿರ್ದೇಶನದಲ್ಲಿ ಬ್ಯುಸಿ ಇರುವ ಪ್ರಭುದೇವ, ಹೊಸ ಸಿನಿಮಾದ ಬಗ್ಗೆ ಖುಷಿಗೊಂಡಿದ್ದಾರೆ. ಆದರೆ, ಪ್ರಭುಕ್ಕಿಂತ ಸಂತಸ ಪಟ್ಟಿರುವುದು ಹಾಲಿವುಡ್ ತಾರೆಯರು,
ಪ್ರಭುದೇವ ಡ್ಯಾನ್ಸ್ ಕೌಶಲ್ಯದ ಬಗ್ಗೆ ಸಾಕಷ್ಟು ಕೇಳಿರುವ ಬ್ರಿಯಾನಾ, ಪ್ರಭುದೇವ ಜೊತೆ ಕುಣಿಯಲು ಕಾತುರನಾಗಿದ್ದೇನೆ. ಬಾಲಿವುಡ್ ಸಿನಿಮಾಗಳ ಡ್ಯಾನ್ಸ್ ಯೂನಿಕ್ ಆಗಿರುತ್ತದೆ ಎಂದಿದ್ದಾರೆ.
ರೆಮೋ ಕೂಡಾ ಸಕಲ ನೃತ್ಯ ಪ್ರವೀಣ ಪ್ರಭು ಕಡೆಯಿಂದ ಯಾವ ರೀತಿ ಕೆಲಸ ತೆಗೆಸಿಕೊಳ್ಳಬೇಕು ಎಂಬ ಸಮಸ್ಯೆಯಲ್ಲಿದ್ದಾರೆ. ಒಟ್ಟಿನಲ್ಲಿ ಪ್ರಭುದೇವ ಅವರಿಗೆ ಚಾಲೆಂಜ್ ಆಗುವಂಥ ಡ್ಯಾನ್ಸ್ ಸ್ಟೆಪ್ಸ್ ಹಾಕಿಸುವ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಹಾಲಿವುಡ್ ಬೆಡಗಿಯರ ಜೊತೆ ಪ್ರಭು ಕುಣಿತ ಹೇಗಿರುತ್ತೋ ಕಾದು ನೋಡೋಣ...


Click it and Unblock the Notifications











