ಬೆಳ್ಳಿತೆರೆಗೆ ಕಿಂಗ್ ಖಾನ್ ಶಾರುಖ್ ಪುತ್ರ ಆರ್ಯನ್
ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಮಗನನ್ನು ಈಗಲೇ ಬೆಳ್ಳಿತೆರೆಗೆ ಪರಿಚಯಿಸುವುದಿಲ್ಲ ಎಂದಿದ್ದರು. ಅದಕ್ಕೆಲ್ಲಾ ಕಾಲ ಕೂಡಿಬರಬೇಕು. ಸದ್ಯಕ್ಕೆ ನನ್ನ ಮಗ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಮಾಧ್ಯಮಗಳ ಬಾಯಿಗೆ ಬೀಗ ಹಾಕಿದ್ದರು. ಆದರೆ ಈಗ ಸದ್ದಿಲ್ಲದಂತೆ ಬಾಲಿವುಡ್ ಬಾದ್ ಶಾ ತನ್ನ ಪುತ್ರ ಆರ್ಯನ್ (12)ರನ್ನು ಬೆಳ್ಳಿತೆರೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ.
ಐಪಿಎಲ್ ಮ್ಯಾಚ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರ್ಯನ್ ಎಲ್ಲರ ಕಣ್ಣು ಕುಕ್ಕಿದ್ದ. ಈ ಹಿಂದೆ 'ಕಭಿ ಖುಷಿ ಕಭಿ ಗಮ್' ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ. ಆದರೆ ಚಿತ್ರರಂಗಕ್ಕೆ ಬರುತ್ತಾನೆ ಎಂಬ ಸುದ್ದಿ ಯನ್ನು ಸ್ವತಃ ಶಾರುಖ್ ಅಲ್ಲಗಳೆದಿದ್ದರು. ಆರ್ಯನ್ ರನ್ನು ಚಿತ್ರರಂಗಕ್ಕೆ ಕರೆತನ್ನಿ ಎಂಬ ಸಲಹೆಗಳಿಗೆ ಶಾರುಖ್ ಸೊಪ್ಪು ಹಾಕಿರಲಿಲ್ಲ.
ಸದ್ಯಕ್ಕೆ ಕತೆ, ಚಿತ್ರಕತೆ ಮಾತ್ರ ಸಿದ್ಧವಾಗಿದೆ. ಆದರೆ ಯಾವುದೂ ಅಂತಿಮವಾಗಿಲ್ಲ. ಚಿತ್ರದಲ್ಲಿ ಶಾರುಖ್ ಮತ್ತು ಆರ್ಯನ್ ಅಪ್ಪ ಮಗನಾಗಿ ಕಾಣಿಸಲಿದ್ದಾರೆ. ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಉಳಿದಂತೆ ಚಿತ್ರದ ವಿವರಗಳನ್ನು ಗುಟ್ಟಾಗಿ ಇಡಲಾಗಿದೆ.


Click it and Unblock the Notifications











