»   » ಅಂಧೇರಿ ಕೋರ್ಟ್ ನಿಂದ ಶಾರುಖ್ ಗೆ ನೋಟೀಸು

ಅಂಧೇರಿ ಕೋರ್ಟ್ ನಿಂದ ಶಾರುಖ್ ಗೆ ನೋಟೀಸು

Posted By:
Subscribe to Filmibeat Kannada

ಮುಂಬೈನ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ'ಓಂ ಶಾಂತಿ ಓಂ' ಚಿತ್ರದ ನಾಯಕ ಶಾರುಖ್ ಖಾನ್, ಅವರ ಪತ್ನಿ ಗೌರಿ ಖಾನ್ ಮತ್ತು ಚಿತ್ರದ ನಿರ್ದೇಶಕಿ ಫರಾಖಾನ್ ಅವರನ್ನುಕೋರ್ಟ್ ಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ.

ಹಳೆ ಹಿಂದಿ ಚಿತ್ರಗಳ ಖ್ಯಾತ ನಾಯಕನಟ ಮನೋಜ್ ಕುಮಾರ್, ಈ ಚಿತ್ರದ ಒಂದು ಸನ್ನಿವೇಶದಲ್ಲಿ ತಮ್ಮನ್ನು ಅಣಕಿಸುವಂತೆ ಚಿತ್ರಿಸಲಾಗಿದೆ ಎಂದು ಶಾರುಖ್ ಖಾನ್ ಮತ್ತವರ ಪತ್ನಿ ಹಾಗೂ ನಿರ್ದೇಶಕಿ ಮೇಲೆ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ನ.25ಕ್ಕೆ ಕೋರ್ಟ್ ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಮೂವರು ಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮನೋಜ್ ಕುಮಾರ್ ಪರ ವಕೀಲರಾದ ಅಶೋಕ್ ಸರೌಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada