ಚೇತನ್ ಭಗತ್ ಅವ್ರ, R2020 ಸಿನ್ಮಾ ಮಾಡ್ತಾರಂತೆ!

ಚೇತನ್ ರ ಜನಪ್ರಿಯ ಕಾದಂಬರಿ '2 States' ಚಿತ್ರವಾಗುತ್ತಿದೆ. ನಾಯಕ ಕ್ರಿಶ್ ಪಾತ್ರವನ್ನು ಬಾಲಿವುಡ್ ನ ಬಿಂದಾಸ್ ನಟ ಸೈಫ್ ಅಲಿಖಾನ್ ನಿರ್ವಹಿಸಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಅದು ಹಾಗಿರಲಿ ಹೊಸ ವಿಷ್ಯ ಎಂದರೆ...
ಇತ್ತೀಚೆಗೆ ಇನ್ಫೋಸಿಸ್ ಬಾಡಿ ಶಾಪ್ ಎಂದು ವಿವಾದಕ್ಕೆ ಗುರಿಯಾಗಿದ್ದ ಚೇತನ್ ಗೆ ಈಗ ಆರ್ 2020 ಹೊಸ ಹುರುಪು ನೀಡುತ್ತಿದೆ.
ಐಐಟಿಯ ಹಳೆ ವಿದ್ಯಾರ್ಥಿ ಚೇತನ್ ಭಗತ್ ಅವರ ಇತ್ತೀಚಿನ ಬಹು ಜನಪ್ರಿಯ ಕಾದಂಬರಿ 'ರೆವಲ್ಯೂಷನ್ 2020' ಬಾಲಿವುಡ್ ಚಿತ್ರವಾಗಲಿದೆಯಂತೆ.
ಗೋಪಾಲ್ ಪಾತ್ರದಲ್ಲಿ ಇಮ್ರಾನ್ ಖಾನ್, ರಾಘವ ಪಾತ್ರದಲ್ಲಿ ಅಭಯ್ ಡಿಯೋಲ್ ಹಾಗೂ ಆರತಿ ಪಾತ್ರದಲ್ಲಿ ಸೋನಮ್ ಕಪೂರ್ ನಟಿಸುವ ಸಾಧ್ಯತೆಯಿದೆ.
ಆದರೆ, ಇನ್ನೂ ಚಿತ್ರ ತಯಾರಿಕೆ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಯಾವುದೂ ಫೈನಲ್ ಆಗಿಲ್ಲ. ವಾರಣಾಸಿಯಲ್ಲಿ ನಡೆಯುವ ಈ ಯುವ ಜನಾಂಗದ ಕಥೆಯನ್ನು ಇಷ್ಟಪಟ್ಟಿರುವ ಕರಣ್ ಜೋಹರ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಹಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆರ್ 2020 ಚಿತ್ರವಾಗುತ್ತದೆ ಎಂಬ ಸುದ್ದಿ ಲೀಕ್ ಆಗಿದ್ದೆ ಚೇತನ್ ಅಭಿಮಾನಿ ಓದುಗರು ಥ್ರಿಲ್ ಆಗಿದ್ದಾರೆ. ಗೆಳೆತನ, ಪ್ರೇಮ, ರಾಜಕೀಯ, ಭ್ರಷ್ಟಾಚಾರ, ಸಾಧನೆ, ಕ್ರಾಂತಿ ಮನೋಭವದ ಕಥೆ ಕ್ಲಿಕ್ ಆಗುವ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.


Click it and Unblock the Notifications











