twitter
    For Quick Alerts
    ALLOW NOTIFICATIONS  
    For Daily Alerts

    ಚೇತನ್ ಭಗತ್ ಅವ್ರ, R2020 ಸಿನ್ಮಾ ಮಾಡ್ತಾರಂತೆ!

    By Mahesh
    |

    Chetan Bhagat
    ಚೇತನ್ ಭಗತ್, ಆಮ್ ಆದ್ಮಿನಿಂದ ಟೆಕ್ಕಿಗಳ ತನಕ ತನ್ನ ಓದಿಗರ ಜಾಲವನ್ನು ವಿಸ್ತರಿಸಿಕೊಂಡಿರುವ ಬುದ್ಧಿವಂತ ಲೇಖಕ. 3 ಈಡಿಯಟ್ಸ್ ಚಿತ್ರದ ಯಶಸ್ಸಿನ ನಂತರ ಚೇತನ್ ರ ಕಾದಂಬರಿಗಳಿಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚುತ್ತಿದೆ.

    ಚೇತನ್ ರ ಜನಪ್ರಿಯ ಕಾದಂಬರಿ '2 States' ಚಿತ್ರವಾಗುತ್ತಿದೆ. ನಾಯಕ ಕ್ರಿಶ್ ಪಾತ್ರವನ್ನು ಬಾಲಿವುಡ್ ನ ಬಿಂದಾಸ್ ನಟ ಸೈಫ್ ಅಲಿಖಾನ್ ನಿರ್ವಹಿಸಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಅದು ಹಾಗಿರಲಿ ಹೊಸ ವಿಷ್ಯ ಎಂದರೆ...

    ಇತ್ತೀಚೆಗೆ ಇನ್ಫೋಸಿಸ್ ಬಾಡಿ ಶಾಪ್ ಎಂದು ವಿವಾದಕ್ಕೆ ಗುರಿಯಾಗಿದ್ದ ಚೇತನ್ ಗೆ ಈಗ ಆರ್ 2020 ಹೊಸ ಹುರುಪು ನೀಡುತ್ತಿದೆ.

    ಐಐಟಿಯ ಹಳೆ ವಿದ್ಯಾರ್ಥಿ ಚೇತನ್ ಭಗತ್ ಅವರ ಇತ್ತೀಚಿನ ಬಹು ಜನಪ್ರಿಯ ಕಾದಂಬರಿ 'ರೆವಲ್ಯೂಷನ್ 2020' ಬಾಲಿವುಡ್ ಚಿತ್ರವಾಗಲಿದೆಯಂತೆ.

    ಗೋಪಾಲ್ ಪಾತ್ರದಲ್ಲಿ ಇಮ್ರಾನ್ ಖಾನ್, ರಾಘವ ಪಾತ್ರದಲ್ಲಿ ಅಭಯ್ ಡಿಯೋಲ್ ಹಾಗೂ ಆರತಿ ಪಾತ್ರದಲ್ಲಿ ಸೋನಮ್ ಕಪೂರ್ ನಟಿಸುವ ಸಾಧ್ಯತೆಯಿದೆ.

    ಆದರೆ, ಇನ್ನೂ ಚಿತ್ರ ತಯಾರಿಕೆ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಯಾವುದೂ ಫೈನಲ್ ಆಗಿಲ್ಲ. ವಾರಣಾಸಿಯಲ್ಲಿ ನಡೆಯುವ ಈ ಯುವ ಜನಾಂಗದ ಕಥೆಯನ್ನು ಇಷ್ಟಪಟ್ಟಿರುವ ಕರಣ್ ಜೋಹರ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಹಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಆರ್ 2020 ಚಿತ್ರವಾಗುತ್ತದೆ ಎಂಬ ಸುದ್ದಿ ಲೀಕ್ ಆಗಿದ್ದೆ ಚೇತನ್ ಅಭಿಮಾನಿ ಓದುಗರು ಥ್ರಿಲ್ ಆಗಿದ್ದಾರೆ. ಗೆಳೆತನ, ಪ್ರೇಮ, ರಾಜಕೀಯ, ಭ್ರಷ್ಟಾಚಾರ, ಸಾಧನೆ, ಕ್ರಾಂತಿ ಮನೋಭವದ ಕಥೆ ಕ್ಲಿಕ್ ಆಗುವ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

    English summary
    Former IITian, Writer Chetan Bhagat's latest novel 'Revolution 2020' is all set to become another Bollywood flick. Discussion on casting and movie planning is going on, Imran Khan is being considered for Gopal’s character, Abhay Deol as Raghava and Arthi’s role will be offered to Sonam Kapoor according to sources.
    Wednesday, October 26, 2011, 12:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X