For Quick Alerts
  ALLOW NOTIFICATIONS  
  For Daily Alerts

  ಬುರ್ಖಾದಲ್ಲಿ ಸೆರೆಸಿಕ್ಕ ಬೆಡಗಿ ಮಲ್ಲಿಕಾ ಶೆರಾವತ್

  By Rajendra
  |

  ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುರ್ಖಾತೊಟ್ಟ ಮಹಿಳೆಯೊಬ್ಬರು ಬಿರಬಿರನೆ ಹೆಜ್ಜೆ ಹಾಕುತ್ತಾ ಬಂದರು. ಕೈಯಲ್ಲಿ ವ್ಯಾನಿಟಿ ಬ್ಯಾಗು ಜೊತೆಗೆ ದಿನಚರಿ ಹಿಡಿದು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಈಕೆಯ ಮೇಲೆ ಪತ್ರಕರ್ತರ ಕಣ್ಣು ಬಿದ್ದಿದೆ. ಈಕೆ ಯಾರೋ ಸೆಲೆಬ್ರಿಟಿನೇ ಇರಬೇಕು ಎಂಬ ಅವರ ಅನುಮಾನ ನಿಜವಾಗಿದೆ.

  ಇಷ್ಟೆಲ್ಲಾ ಅನುಮಾನ ಬಂದ ಮೇಲೆ ಪತ್ರಕರ್ತರು ಸುಮ್ಮನಿರಲು ಸಾಧ್ಯವೆ. ಹತ್ತಿರ ಹೋಗಿ ಕೇಳಿಯೇ ಬಿಟ್ಟಿದ್ದಾರೆ. ಮುಖ ತೋರಿಸಲು ಒಲ್ಲದ ಹಾಕೆ ಬುರ್ಖಾದಲ್ಲೆ ಉತ್ತರ ನೀಡಿ ಅಲ್ಲಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೆ ಈಕೆ ಬೇರಾರು ಅಲ್ಲ ಬಾಲಿವುಡ್ ಸೆಕ್ಸಿ ತಾರೆ ಮಲ್ಲಿಕಾ ಶೆರಾವತ್ ಎಂಬುದು ಪತ್ರಕರ್ತರಿಗೆ ಗೊತ್ತಾಗಿದೆ.

  ಮಲ್ಲಿಕಾ ಶೆರಾವತ್ ಪತ್ರಕರ್ತರನ್ನು ಯಾಮಾರಿಸಿದ ಪ್ರಸಂಗವಿದು. ಪತ್ರಕರ್ತರ ಕಣ್ಣು ತಪ್ಪಿಸಿ ಆಕೆ ಟೊರೊಂಟೋದಲ್ಲಿ ನಡೆಯುತ್ತಿರುವ ಇಂಟರ್‌ ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ 2011ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗುತ್ತಿದ್ದರು. ಮುಂಬೈ ಏರ್‌ಪೋರ್ಟ್‌ನಲ್ಲಿ ಸೆಲೆಬ್ರಿಟಿಗಳನ್ನು ಸೆರೆಹಿಡಿಯರು ಪತ್ರಕರ್ತರು ಕಾದು ಕುಳಿತಿದ್ದರು.

  ಈ ಹಿಂದೆ ಮಲ್ಲಿಕಾ ಸಹೋದರ ವಿಕ್ರಂ ಲಾಂಬಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಕಸ್ಟಮ್ಸ್ ಅನುಮತಿ ಮೀರಿ ಆತ ಹೆಚ್ಚು ಸಾಮಗ್ರಿ ಕೊಂಡೊಯ್ಯುತ್ತಿದ್ದದ್ದೇ ಇದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪತ್ರಕರ್ತರು ಎಲ್ಲಿ ಪ್ರಶ್ನೆಗಳನ್ನು ಕೇಳಿ ತಮ್ಮನ್ನು ಗಲಿಬಿಲಿಗೊಳಿಸುತ್ತಾರೋ ಎಂದು ಮಲ್ಲಿಕಾ ಈ ಪ್ಲಾನ್ ಮಾಡಿದ್ದರು. ಆದರೆ ಆಕೆಯ ಐನಾತಿ 'ಪಿಲಾನ್' ಉಲ್ಟಾ ಆಗಿದೆ. (ಏಜೆನ್ಸೀಸ್)

  English summary
  Bollywood actress Mallika Sherawat spotted in Burkha at Mumbai's international airport. She dressed in a burkha, carrying a big white tote bag with a Louis Vuitton diary and a cell phone in her hand, came to the airport in a semi luxury car and quickly walked inside the check-in gate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X