ಮೋಹಕ ತಾರೆ ರೇಖಾ ರಾಜ್ಯಸಭೆಗೆ ನಾಮಕರಣ
ಮೋಹಕ ತಾರೆ ರೇಖಾ ರಾಜ್ಯಸಭೆಗೆ ನಾಮಕರಣಗೊಂಡಿದ್ದಾರೆ. ಈ ಮೊದಲು ಶಿಫಾರಸು ಮಾಡಲಾಗಿದ್ದ ರೇಖಾ ಹೆಸರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕರಿಸಿದ್ದಾರೆ. ಅಲ್ಲಿಗೆ ಚಿರಯೌವನೆ ಖ್ಯಾತಿಯ ಸುಂದರಿ ರೇಖಾರ ರಾಜ್ಯಸಭೆ ಪ್ರವೇಶ ಅಧಿಕೃತಗೊಂಡಂತಾಗಿದೆ. ರೇಖಾ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ರೇಖಾ ಜೊತೆ ಖ್ಯಾತ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ನಾಮನಿರ್ದೇಶನಕ್ಕೂ ಕೂಡ ಪ್ರತಿಭಾ ಪಾಟೀಲ್ ಅಂಕಿತ ನೀಡಿದ್ದಾರೆ. 80ರ ದಶಕದಲ್ಲಿ ತಮ್ಮ ಅಮೋಘ ನಟನೆ ಹಾಗೂ ಮಾದಕ ಸೌಂದರ್ಯದಿಂದ ಚಿತ್ರರಸಿಕರಿ ಮನದಲ್ಲಿ ಸ್ಥಾನಪಡೆದು ಮೆರೆದ ರೇಖಾ ಇಂದಿಗೂ ತಮ್ಮ ಛಾಪನ್ನು ಹಾಗೇ ಉಳಿಸಿಕೊಂಡಿದ್ದಾರೆ.
ಸಿನಿಮಾ ರಂಗದಲ್ಲಿ ಬಹಳಷ್ಟು ಮಿಂಚಿ ಬೆರಗು ಮೂಡಿಸಿದ್ದ ಈ ನಟಿ, ಇದೀಗ ರಾಜಕೀಯದತ್ತ ಹೆಜ್ಜೆ ಇಟ್ಟಂತಾಗಿದೆ. ತಮ್ಮದಲ್ಲದ ಕ್ಷೇತ್ರದಲ್ಲಿ ರೇಖಾ ಯಾವ ನಡೆ ಅನುಸರಿಸಲಿದ್ದಾರೆ. ಅಲ್ಲಿ ತಮ್ಮ ಚಾಕಚಕ್ಯತೆಯನ್ನು ಯಾವ ರೀತಿ ಪ್ರದರ್ಶಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ರೇಖಾ ಪ್ರವೇಶಕ್ಕಾಗಿ ಅವರ ಅಭಿಮಾನಿ ವರ್ಗ ಕಾದುಕುಲೀತಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress of yesteryear Rekha nominated for members of Rajya Sabha. 57-year-old Rekha was one of the top heroines of the 80s in Hindi films. She had won several national awards in her acting career.


Click it and Unblock the Notifications












