ಬೇಬಿ ಹುಟ್ಟಿದ ಮೇಲೆ ಅಭಿಷೇಕ್ ಕೆಲಸಕ್ಕೆ ತೊಂದರೆ

Aishwarya Rai Abhishek
ಬಾಲಿವುಡ್ ಕಡೆ ಈಗ ಬೆರಳು ಮಾಡಿದರೂ ಸಾಕು, ಐಶ್ವರ್ಯಾ ರೈ ಮಗಳೇ ನೆನಪಾಗುತ್ತಾಳೆ. ಮೊದಲು ನೆನಪಾಗುತ್ತಿದ್ದ ಐಶ್ವರ್ಯಾ ರೈ ಬಚ್ಚನ್ ಪರಿವಾರ ಸೇರಿಕೊಂಡ ನಂತರ ಬಾಲಿವುಡ್ ಎಂಬುದು ಬಚ್ಚನ್ ಪರಿವಾರದ ಸುತ್ತ ಸುತ್ತುತ್ತಿತ್ತು ಎಂಬುದು ಅತಿಶಯೋಕ್ತಿ ಅಲ್ಲ. ಆದರೆ ಐಶೂಗೆ ಹೆಣ್ಣುಮಗುವಾಗಿದ್ದೇ ತಡ, ಈಗ ಎಲ್ಲರ ಬಾಯಲ್ಲೂ ಐಶೂಬೇಬಿಯದೇ ಸುದ್ದಿ. ಅಜ್ಜ ಅಮಿತಾಬ್ ಹಾಗೂ ಅಪ್ಪ ಅಭಿಯಂತೂ ಬೇಬಿ ಬಿಟ್ಟು ಅಲುಗಾಡುತ್ತಿಲ್ಲ.

ಈಗ ಆ ಬೇಬಿಯ ತಂದೆ ಪರಿಸ್ಥಿತಿಯ ಬಗ್ಗೆ ಕೇಳಿ. ಅವರಿಗೆ ವೃತ್ತಿಯ ಕಡೆ ಗಮನವೇ ನಿಲ್ಲುತ್ತಿಲ್ಲವಂತೆ. "ಬೇಟಿ ಬಿ ಹುಟ್ಟಿದ ಮೇಲೆ ಕೆಲಸದತ್ತ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಯೋಚನೆಗಳಲ್ಲೆಲ್ಲ ಆಕೆಯೇ ತುಂಬಿದ್ದಾಳೆ. ಐಶ್ ಳ ತೋಳಲ್ಲಿ ಅವಳು ಮಲಗುವುದನ್ನು ನೋಡುವುದೇ ನನಗೆ ಇಷ್ಟ" ಎಂದಿದ್ದಾರೆ ಬೇಬಿಯ ಅಪ್ಪ ಅಭಿ.

ಅಮಿತಾಬ್ ಬಚ್ಚನ್ ಮೊಮ್ಮಗು ಅಂತಿಂಥ ಮಗು ಅಲ್ಲಾರೀ. ಐಶ್-ಅಭಿ ಮದುವೆಯಾದ ದಿನದಿಂದಲೂ ಎಲ್ಲರ ನಿರೀಕ್ಷೆಯ ಕೂಸು. ಜೊತೆಗೆ ಐಶೂ ಗರ್ಭಿಣಿ ಎಂದ ಮೇಲಂತೂ ಲೋಕವೇ ಹೆರಿಗೆಗೆ ಕಾದು ಕೂತಿತ್ತು. ಬೆಟ್ಸ್, ಪೂಜೆ, ಹಾಗೂ ಆಸ್ಪತ್ರೆಯ ಸುತ್ತ ಬಿಗಿಭದ್ರತೆಯ ನಡುವೆ ಹುಟ್ಟಿದ ಮೇಲೆ ಅವಳ ಬಗ್ಗೇ ಯೋಚಿಸುವ ಕೆಲಸ ಕೊಟ್ಟ ಈ ಮಗು ಸಾಮಾನ್ಯದ್ದೆಂದು ಹೇಗೆ ಹೇಳುವುದು. (ಏಜೆನ್ಸೀಸ್)

More from Filmibeat

English summary
Aishwarya Rai baby girl have attracted all concentration of her father Abhishek Bachchan. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X