»   » ರಾಮ್ ಗೋಪಾಲ್ ವರ್ಮಾರ ಬಾಣದಂತ ಮಾತು

ರಾಮ್ ಗೋಪಾಲ್ ವರ್ಮಾರ ಬಾಣದಂತ ಮಾತು

Posted By:
Subscribe to Filmibeat Kannada
Ram Goapl Varma
ಬಾಲಿವುಡ್ ಖ್ಯಾತ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಖಡಕ್ ಮಾತಿಗೆ ಹೆಸರಾದವರು. ಅವರಿಗೆ ಅನ್ನಿಸಿದ್ದನ್ನು ನೇರಾನೇರ ಹೇಳಿ ತಮ್ಮ ಮೆದುಳನ್ನು ರಿಫ್ರೆಶ್ ಮಾಡಿಕೊಳ್ಳುವುದಲ್ಲದೇ ಇತರರನ್ನೂ ಯೋಚನೆಗೆ ಹಚ್ಚಿ ಬುದ್ಧಿವಂತರನ್ನಾಗಿ ಮಾಡುವ ಸಾಮರ್ಥ್ಯ ಅವರ ಮಾತಿನಲ್ಲಿದೆ.

"ಯಾವ ಜನರೂ ಸಂಪೂರ್ಣ ಸತ್ಯವನ್ನು ತಿಳಿದುಕೊಂಡಿರುವುದಿಲ್ಲ. ಎಲ್ಲರಿಗೂ ಗೊತ್ತಿರುವುದು ಪರಿಷ್ಕ್ರತವಾದ ಸತ್ಯಗಳೇ" ಎಂಬುದು ಅವರ ತೀರಾ ಇತ್ತೀಚಿನ ಹೇಳಿಕೆ. ಸಾಕಷ್ಟು ವಿಚಾರ ಮಾಡಿ ನಂತರ ಬಾಯಿಬಿಡುವ ಜಾಯಮಾನದ ವರ್ಮಾರ ಈ ಮಾತಿನ ಹಿಂದೆ ಕೂಡ ಬೆಟ್ಟದಷ್ಟು ಚಿಂತನೆಯಿದೆ.

ಮೊನ್ನೆ ಮೊನ್ನೆ ವಿದ್ಯಾ ಬಾಲನ್ ನಟನೆಯ, ಏಕ್ತಾ ಕಪೂರ್ ನಿರ್ಮಾಣದ 'ದಿ ಡರ್ಟಿ ಪಿಕ್ಚರ್' ನೋಡಿ ಅದರ ಬಗ್ಗೆ "ಇಷ್ಟು ಒಳ್ಳೆಯ ಚಿತ್ರ ಮಾಡಿರುವ ಏಕ್ತಾರಿಗೆ ನಾನು 2 ಬಿಲಿಯನ್ ಕಿಸ್ ಕೊಡಲು ಇಷ್ಟಪಡುತ್ತೇನೆ" ಎಂದಿದ್ದರು. ಒಟ್ಟಿನಲ್ಲಿ ಅವರ ಹೇಳಿಕೆಗಳೆಲ್ಲಾ ವಿಭಿನ್ನವಾಗಿರುವುದರ ಜೊತೆ ಗಮನಸೆಳೆಯುವಂತಿರುತ್ತವೆ. (ಏಜೆನ್ಸೀಸ್)

English summary
Famous Bollywood director Ram Gopal Varma told that Nobody knows the truth. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada