ದೇಸಿ ಬಾಯ್ಸ್ ಚಿತ್ರದ 'ಬಾಕ್ಸ್ ಆಫೀಸ್' ವರದಿ

ಈ ದೇಸಿ ಬಾಯ್ಸ್ ಚಿತ್ರಕ್ಕೆ ಹೂಡಿದ ಬಂಡವಾಳ ರು. 65 ಕೋಟಿ. ಭಾರತದಾದ್ಯಂತ 2,200 ಸೆಂಟರ್ ಗಳಲ್ಲಿ ಬಿಡುಗಡೆ ಕಂಡಿರುವ ಈ ಚಿತ್ರ, ಹೌಸ್ ಫುಲ್ ಪ್ರದರ್ಶನ ಕಾಣುವಲ್ಲಿ ವಿಫಲವಾಗಿದೆ. ಚಿತ್ರಮಂದಿರಕ್ಕೆ ಕೇವಲ ಶೇ. 50 ರಿಂದ 65 ರಷ್ಟು ಮಾತ್ರ ಪ್ರೇಕ್ಷಕರನ್ನು ಸೆಳೆದಿರುವ ಈ ಚಿತ್ರ, ಸೋಲಿನ ಸುಳಿಯಲ್ಲಿ ಸಿಲಕುವ ಸಂಭವ ನಿರ್ಮಾಣವಾಗಿದೆ.
ಅಲ್ಲಿಗೆ, ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರವೊಂದು ನೆಲಕಚ್ಚುವ ಲಕ್ಷಣ ಕಂಡುಬಂದಿದ್ದು, ನಿರ್ಮಾಪಕರ ಮುಖ ಚಿಕ್ಕದಾಗಲು ಕಾರಣವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಇದರಲ್ಲಿ ನಟಿಸಿರುವ ಜಾನ್, ಅಕ್ಷಯ್, ದೀಪಿಕಾ ಹಾಗೂ ಚಿತ್ರಾಂಗದಾ ಅವರ ನಿರೀಕ್ಷೆ ತಲೆಕೆಳಗಾಗಿದೆ. ಮುಂದಿನ ದಿನಗಳಲ್ಲಿ ಚಿತ್ರ ಚೇತರಿಸಿಕೊಳ್ಳುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ. (ಏಜೆನ್ಸೀಸ್)
More from Filmibeat
English summary
Bollywood movie Desi Boyz had a poor opening at the collection centers. Akshay Kumar and John Abraham starer has earned Rs. 9 crore at the Indian Box Office on first day.
ಬಾಲಿವುಡ್ ಬಾಕ್ಸ್ ಆಫಿಸ್ ಅಕ್ಷಯ್ ಕುಮಾರ್ ಜಾನ್ ಅಬ್ರಹಾಂ ದೇಸಿ ಬಾಯ್ಸ್ ದೀಪಿಕಾ ಪಡುಕೋಣೆ ಚಿತ್ರಾಂಗದಾ ಸಿಂಗ್ box office bollywood desi boyz akshay kumar john abraham deepika padukone chitrangada singh


Click it and Unblock the Notifications











