»   » ಮಿಕ್ಕವರನ್ನು ಮೀರಿಸಿದ ವಿದ್ಯಾ ಬಾಲನ್, ಧನುಷ್

ಮಿಕ್ಕವರನ್ನು ಮೀರಿಸಿದ ವಿದ್ಯಾ ಬಾಲನ್, ಧನುಷ್

Posted By:
Subscribe to Filmibeat Kannada
Dhanush Vidya Balan
'ಕೊಲವೆರಿ ದಿ' ಜನಪ್ರಿಯ ಹಾಡಿನ ನಟ ಧನುಷ್ ಹಾಗೂ 'ದಿ ಡರ್ಟಿ ಪಿಕ್ಚರ್' ನಟಿ ವಿದ್ಯಾ ಬಾಲನ್, ಇತರ ಹತ್ತುಹಲವು ನಟನಟಿಯರೊಂದಿಗೆ "2011ರ ಭಾರತೀಯ ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ' ರೇಸಿನಲ್ಲಿ ಇದ್ದಾರೆ. ಈ ಸ್ಪರ್ಧೆ, People for Ethical Treatment of Animals (PETA) ನಿಂದ ಆಯೋಜಿಸಲ್ಪಟ್ಟಿದೆ.

ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಹೇಮಾ ಮಾಲಿನಿ, ಸೋನು ಸೂದ್, ಆಯೇಷಾ ಟಕಿಯಾ ಕೂಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಮೊದಲ ಸುತ್ತಿನಲ್ಲಿ ವಿದ್ಯಾ ಬಾಲನ್ ಹಾಗೂ ಧನುಷ್ ಮುನ್ನಡೆ ಸಾಧಿಸಿದ್ದಾರೆ. ಈ ಸಂಬಂಧ ಮಾತನಾಡಿದ PETA ಮುಖ್ಯಸ್ಥೆ ಪೂರ್ವ ಜೋಶಿಪುರ "ಹಾಲಿವುಡ್ ಹಾಗೂ ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿಗಳೆಲ್ಲಾ ಸಸ್ಯಾಹಾರಿಗಳು" ಎಂದಿದ್ದಾರೆ.

ಈ ಸ್ಪರ್ಧೆಯ ವಿಜೇತರನ್ನು ವೋಟ್ ಮೂಲಕ ಆಯ್ಕೆ ಮಾಡಿ ಜನವರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಸದ್ಯಕ್ಕೆ 'ಆಲ್ ಇಂಡಿಯಾ ಸೆನ್ಸೇಷನ್'ಗಳಾಗಿ ಹೊರಹೊಮ್ಮಿರುವ ವಿದ್ಯಾ ಬಾಲನ್ ಹಾಗೂ ಧನುಷ್ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಜನವರಿಯಲ್ಲಿ ಹೇಗೂ ಫಲಿತಾಂಶ ಪ್ರಕಟವಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Dhanush, Vidya Balan along with many other celebrities are in the race to become the India Hottest Vegetarian Celebrity of 2011. The competition is conducted by People for Ethical Treatment of Animals.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada