»   » ಜಾನ್ ಅಬ್ರಹಾಂ ವೀರ್ಯಕ್ಕೆ ಸಖತ್ ಡಿಮ್ಯಾಂಡ್

ಜಾನ್ ಅಬ್ರಹಾಂ ವೀರ್ಯಕ್ಕೆ ಸಖತ್ ಡಿಮ್ಯಾಂಡ್

Posted By:
Subscribe to Filmibeat Kannada

ನೇತ್ರದಾನ, ರಕ್ತದಾನ, ಅಂಗಾಂಗದಾನದ ಜೊತೆಗೆ ಈಗ ಹೊಸದಾಗಿ ವೀರ್ಯದಾನವೂ ಸೇರ್ಪಡೆಯಾಗಿದೆ. ಬಾಲಿವುಡ್ ನಟ ಜಾನ್ ಅಬ್ರಹಾಂ ವೀರ್ಯದಾನ ಮಾಡುವುದಾಗಿ ಪ್ರಕಟಿಸಿದ್ದೇ ತಡ ಕೆಲವು ಮಹಿಳೆಯರು ಜಾನ್‌ಗೆ ಬೆನ್ನುಬಿದ್ದಿದ್ದಾರಂತೆ. ಇತ್ತೀಚೆಗೆ ಕೆಲವು ಮಹಿಳೆಯರು ಜಾನ್‌ರನ್ನು ಸಂಪರ್ಕಿಸಿ ತಮ್ಮ ವೀರ್ಯವನ್ನು ದಾನ ಮಾಡಿ ಎಂದು ಅಂಗಲಾಚಿದರಂತೆ.

ಇದಕ್ಕೆ ಜಾನ್ ಅಬ್ರಹಾಂ ಕಡೆಯಿಂದಲೂ ಸಕಾರಾತ್ಮಕ ಸೂಚನೆ ಸಿಕ್ಕಿದೆಯಂತೆ. ವೀರ್ಯದಾನಕ್ಕೆ ಸಂಬಂಧಿಸಿದ ಕಥಾಹಂದರವುಳ್ಳ ಚಿತ್ರವನ್ನು ಜಾನ್ ನಿರ್ಮಿಸುತ್ತಿದ್ದಾರೆ. ಹಾಗಾಗಿ, ಸ್ವತಃ ವೀರ್ಯದಾನಕ್ಕೂ ಮುಂದಾಗಿದ್ದಾರೆ.

"ಜಗತ್ತಿನಲ್ಲಿ ಸಾಕಷ್ಟು ಮಂದಿ ಮಕ್ಕಳಿಲ್ಲದ ದಂಪತಿಗಳಿದ್ದಾರೆ. ಅವರಿಗೆ ಜೀವನ ದುಸ್ತರವೆನಿಸದಂತೆ ಪುರುಷರು ತಮ್ಮ ವೀರ್ಯದಾನಕ್ಕೆ ಮುಂದಾಗಬೇಕು. ನಾನು ಅಂಥ ಮಕ್ಕಳಿಲ್ಲದ ದಂಪತಿಗಳಿಗೆ ವೀರ್ಯ ಕೊಡಲು ಸಿದ್ಧವಾಗಿದ್ದೇನೆ" ಎಂದಿದ್ದರು ಜಾನ್.

ಜಾನ್ ಹೀಗೆ ಹೇಳಿದ್ದೇ ತಡ ನಾ ಮುಂದು ತಾ ಮುಂದು ಎಂದು ಹೆಂಗೆಳೆಯರು ಕ್ಯೂ ನಿಲ್ಲಲು ಹೊರಟಿದ್ದಾರೆ. ಆದರೆ ಜಾನ್ ಎಷ್ಟು ಜನಕ್ಕೆ ವೀರ್ಯದಾನ ಮಾಡಲು ಸಾಧ್ಯ. ಅದೇನು ಲೀಟರ್‌ಗಟ್ಟಲೆ ಕರೆದು ಕೊಡೋದಕ್ಕೆ ಹಾಲೇ? ಅಂದಹಾಗೆ ಆ ಚಿತ್ರದ ಹೆಸರು ವಿಕಿ ಡೋನರ್. ಮುಖ್ಯಭೂಮಿಕೆಯಲ್ಲಿ ಅಯುಶ್‌ಮಾನ್ ಹಾಗೂ ಯಾಮಿ ಗೌತಮ್ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
John Abraham is one such Bollywood actor who doesn't believe in the stereotyped attitude of shying away from delicate and sensitive topics like homosexuality or sperm donation.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X