ಹಾಟ್ ಲೇಡಿ ಮೇಲೆ ಸೆಕ್ಸಿ ಆಂಟಿ ಕ್ರಿಮಿನಲ್ ಕೇಸ್

By Rajendra

ಬಾಲಿವುಡ್ ಸೆಕ್ಸಿ ಆಂಟಿ ಪೂಜಾ ಬೇಡಿ ಮತ್ತೊಬ್ಬ ಹಾಟ್ ಲೇಡಿ ಪೂಜಾ ಮಿಶ್ರಾ ಮೇಲೆ ಗುರುವಾರ (ಏ.26) ಕ್ರಿಮಿನಲ್ ಕೇಸ್ ಜಡಿದಿದ್ದಾರೆ. ಈ ಸಂಬಂಧ ಪೂಜಾ ಬೇಡಿ ಟ್ವೀಟಿಸಿದ್ದು, "ಪೂಜಾ ಮಿತ್ರಾ ಅವರು ತಮ್ಮ ಮೇಲೆ ಮಾಡಿರುವ ಆರೋಪಗಳನ್ನು ನಿರೂಪಿಸಿಲ್ಲ. ಇದಕ್ಕೆ ಕ್ಷಮೆ ಕೂಡ ಕೇಳಲಿಲ್ಲ. ಹಾಗಾಗಿಯೇ ಆಕೆಯ ಮೇಲೆ ಕೋರ್ಟ್‌ನಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದೇನೆ" ಎಂದಿದ್ದಾರೆ.

'ಬಿಗ್ ಬಾಸ್ 5' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರಿಬ್ಬರೂ ಬಳಿಕ ಶರಂಪರ ಜಗಳವಾಡಿದ್ದರು. ರಾಷ್ಟ್ರೀಯ ವಾಹಿನಿಯಲ್ಲಿ ತಮ್ಮ ಮಾನ, ಮರ್ಯಾದೆಯನ್ನು ಮೂರು ಕಾಸಿಗೆ ಪೂಜಾ ಬೇಡಿ ಹರಾಜು ಹಾಕಿದ್ದಾರೆ ಎಂದು ಬೇಡಿ ರೋಷ ವ್ಯಕ್ತಪಡಿಸಿದ್ದರು. ಅದೇ ರೀತಿ ಪೂಜಾ ಮಿಶ್ರಾ ಸಹ ಬೇಡಿಯ ವಿರುದ್ಧ ಆರೋಪಗಳ ಸುರಿಮಳೆಗರೆದಿದ್ದರು. ತನ್ನ ಎಕ್ಸ್‌ಬಾಯ್ ಫ್ರೆಂಡ್ ಜೊತೆ ಕೈಜೋಡಿಸಿ ನನ್ನನ್ನು ನಾನಾ ವಿಧದಲ್ಲಿ ಹಿಂಸಿಸಿದ್ದಾಳೆ ಎಂದು ನಟಿಕೆ ಮುರಿದಿದ್ದಾಳೆ.

ತನ್ನ ಜೀವಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರುತ್ತಿದ್ದೇನೆ. ನ್ಯಾಯ ವ್ಯವಸ್ಥೆಯ ಬಗ್ಗೆ ನನಗೆ ಅಪಾರ ಗೌರವವಿದೆ. ತನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಪೂಜಾ ಮಿಶ್ರಾಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ ಪೂಜಾ ಬೇಡಿ. ಈ ಬಗ್ಗೆ ಮಿಶ್ರಾ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.

ತುಂತುರು ಮಳೆಯಂತಿದ್ದ ಇವರಿಬ್ಬರ ನಡುವಿನ ಜಗಳ ಈಗ ಏಕಾಏಕಿ ಕುಂಭದ್ರೋಣ ಮಳೆಯಾಗಿ ಉಗ್ರ ರೂಪ ತಾಳಿದೆ. ಈಗ ಇವರಿಬ್ಬರೂ ಕೋರ್ಟ್ ಮೆಟ್ಟಿಲೇರಿರುವುದು ಬಾಲಿವುಡ್ ವಲಯದಲ್ಲಿ ಚರ್ಚನೀಯ ಅಂಶವಾಗಿದೆ. ನ್ಯಾಯಕ್ಕಾಗಿ ಇವರಿಬ್ಬರ ಹೋರಾಟದಲ್ಲಿ ಗೆಲುವು ಯಾರ ಕೊರಳಿಗೆ ಬೀಳುತ್ತದೋ ಎಂಬ ಕುತೂಹಲ ಮನೆಮಾಡಿದೆ. (ಏಜೆನ್ಸೀಸ್)

More from Filmibeat

English summary
The cat fight between Pooja Bedi and Pooja Mishra has reached a new level. The latest twist in the story is that Pooja Bedi has filed a criminal case against Pooja Mishra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X