ಹಿರಿಯ ನಟ ಶಶಿಕಪೂರ್ ಆರೋಗ್ಯ ಸ್ಥಿತಿ ಚಿಂತಾಜನಕ

By Rajendra

ಎಪ್ಪತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡಿದ್ದ ಬಾಲಿವುಡ್ ತಾರೆ ಶಶಿ ಕಪೂರ್ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು.

ಎಪ್ಪತ್ತರ ದಶಕದಲ್ಲಿ ಶಶಿಕಪೂರ್ ಮತ್ತು ಅಮಿತಾಬ್ ಯಶಸ್ವಿ ಜೋಡಿ ಎನ್ನಿಸಿಕೊಂಡಿತ್ತು. ಇವರಿಬ್ಬರು ದೀವಾರ್, ತ್ರಿಶೂಲ್, ಇಮಾನ್ ಧರಮ್ ಮತ್ತು ಸುಹಾಗ್ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರ ರಸಿಕರ ಮನಸೂರೆಗೊಂಡಿದ್ದರು. ದೇಹ ಎರಡಾದರೂ ಜೀವ ಒಂದೇ ಎಂಬಂತೆ ಬಾಲಿವುಡ್‌ನಲ್ಲಿ ಗುರುತಿಸಿಕೊಂಡ ಜೋಡಿ ಇವರದು.

ವಯೋ ಸಹಜವಾ ಸಮಸ್ಯೆಗಳಿಂದ ಶಶಿ ಕಪೂರ್ ಅವರು ಬಳಲುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಆದರೆ ಅವರ ಸದ್ಯದ ಆರೋಗ್ಯ ಪರಿಸ್ಥಿತಿ ಬಗ್ಗೆ ಆಸ್ಪತ್ರೆಯ ವೈದ್ಯರು ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ಶಶಿ ಕಪೂರ್ ಅವರನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಬಿಗ್ ಬಿ ಮಾತನಾಡಿಸಿದ್ದಾರೆ.

ಆಸ್ಪತ್ರೆಯಿಂದ ಹೊರಬಂದಾಗ ಬಿಗ್ ಬಿ ಅವರ ಕಣ್ಣುಗಳು ತೇವವಾಗಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಬಿಗ್ ಬಿ ಹೊರತುಪಡಿಸಿದರೆ ಬಾಲಿವುಡ್‌ನ ಯಾರೊಬ್ಬರೂ ಇದುವರೆಗೂ ಹಿರಿಯ ನಟ ಶಶಿ ಕಪೂರ್ ಅವರನ್ನು ನೋಡಲು ಬರದಿರುವುದು ವಿಷಾದನೀಯ ಸಂಗತಿ. [ಬಿಗ್ ಬಿ]

More from Filmibeat

English summary
Bollywood heartthrob Shashi Kapoor health is in critical. Recently Big B visits hospital and he spent half an hour talking to him. Sources says that Amitabh pained to see Shashi in such a condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X