ಬೆಂಗಳೂರು ಲೀಲಾ ಪ್ಯಾಲೇಸ್‌ನಲ್ಲಿ ಜಾರಿ ಬಿದ್ದ ಜಾಣೆ!
ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಪರಿಸ್ಥಿತಿ ನಗುವವರ ಮುಂದೆ ಎಡವಿಬಿದ್ದಂತಾಗಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ನಡೆಯುತ್ತಿರುವ ಬ್ಲೆಂಡರ್ ಫ್ಯಾಷನ್ ಟೂರ್ 2010ರಲ್ಲಿ ಕ್ಯಾಟ್ ವಾಕ್‌ಗೆ ಇನ್ನೇನು ಹೆಜ್ಜೆ ಹಾಕಬೇಕು ಅಷ್ಟರಲ್ಲಿ ಜಾರಿಬಿದ್ದರು. ಬಳಿಕ ಹೇಗೋ ಸಾವರಿಸಿಕೊಂಡ ಸೋನಾಕ್ಷಿ ಸಾದಾಸೀದಾ ಹೆಜ್ಜೆ ಹಾಕುತ್ತಾ ಕ್ಯಾಮೆರಾಗಳಿಗೆ ತಮ್ಮ ಒಯ್ಯಾರ ತೋರಿದರು.
ಗವಿನ್ ಸಿ ಮಿಗುಲ್ ವಿನ್ಯಾಸಪಡಿಸಿದ್ದ ನವೀನ ವಸ್ತ್ರಗಳನ್ನು ಸೋನಾಕ್ಷಿ ಪ್ರದರ್ಶಿಸುತ್ತಿದ್ದರು. ರ‌್ಯಾಂಪ್ ಮೇಲೆ ಆಕೆ ಜಾರಿಬಿದ್ದ ಬಳಿಕ ಬೇಸರಿಸಿಕೊಂಡು ಫ್ಯಾಶನ್ ಶೋದಿಂದಲೇ ಹೊರಟು ಹೋಗಿದ್ದಾರೆ. ರ‌್ಯಾಂಪ್ ಮೇಲೆ ಸೋನಾಕ್ಷಿ ಇನ್ನೂ ಒಂದು ಸುತ್ತು ಕ್ಯಾಟ್ ವಾಕ್ ಮಾಡಬೇಕಾಗಿತ್ತಂತೆ. ಅಷ್ಟರಲ್ಲಾಗಲೆ ಆಕೆ ಅಲ್ಲಿಂದ ಕಾಲು ಕಿತ್ತಿದ್ದರು.
ಸಲ್ಮಾನ್ ಖಾನ್ ಜೊತೆ 'ದಬಾಂಗ್' ಚಿತ್ರದಲ್ಲಿ ನಟಿಸಿದ ಬಳಿಕ ಸೋನಾಕ್ಷಿ ಸಿನ್ಹಾ ಸಾಕಷ್ಟು ಜನಪ್ರಿಯರಾಗಿದ್ದರು. ಆಕೆ ಹೋದಲೆಲ್ಲಾ ಕ್ಯಾಮೆರಾ ಕಣ್ಣುಗಳು ಸುತ್ತುವರಿಯುತ್ತಿದ್ದವು. ಈಗ ರ‌್ಯಾಂಪ್ ಮೇಲೆ ಜಾರಿ ಬಿದ್ದು ಅಯ್ಯೋ ದೇವರೇ ಈ ಪರಿಸ್ಥಿತಿ ಯಾರಿಗೂ ಬರಬಾರದಿತ್ತು ಎಂಬಂತಾಗಿದೆ. ಅಯ್ಯೋ ಸೋನಾಕ್ಷಿ ನಿನಗೆ ಹೀಗಾಗಬಾರದಿತ್ತು ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ


Click it and Unblock the Notifications











