For Quick Alerts
  ALLOW NOTIFICATIONS  
  For Daily Alerts

  ಸಲ್ಲು ಟೀ ಶರ್ಟ್‌ನಲ್ಲಿ ಸೋನಾಕ್ಷಿ ಸಿನ್ಹಾ ಡಿಂಗ್ ಡಾಂಗ್

  By Rajendra
  |

  'ದಬಾಂಗ್' ಚಿತ್ರದ ಬಳಿಕ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ನಡುವಿನ ಡಿಂಗ್ ಡಾಂಗ್ ಸುದ್ದಿಗಳಿಗೆ ಬರವಿಲ್ಲದಂತಾಗಿದೆ. ಆದರೆ ಈ ಸುದ್ದಿಗಳನ್ನೆಲ್ಲಾ ಕ್ಯಾರೆ ಎನ್ನುತ್ತಿಲ್ಲ ಸೋನಾಕ್ಷಿ. ಒಟ್ನಲ್ಲಿ ಸಲ್ಮಾನ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸೋನಾಕ್ಷಿ ಸಿನ್ಹಾ ದಿಢೀರ್ ಎಂದು ಖ್ಯಾತಿಯ ಉತ್ತುಂಗಕ್ಕೇರಿದರು.

  ಸಲ್ಲು ಮಾಡಿದ ಉಪಕಾರಕ್ಕೆ ಕೃತಜ್ಞಗಳಾಗಿರುವ ಆಕೆ ಈಗ ಸಲ್ಮಾನ್ ಖಾನ್ ಟೀ ಶರ್ಟ್‌ಗಳನ್ನು ತೊಟ್ಟು ಡಿಂಗ್ ಡಾಂಗ್ ಎಂದು ಓಡಾಡುತ್ತಿದ್ದಾಳೆ. ತೊಡೋದಕ್ಕೆ ಇನ್ನೇನು ಸಿಗಲಿಲ್ವ ಎಂದರೆ, ನನಗೆ ಇದೇ ಇಷ್ಟ ಎಂದಿದ್ದಾರೆ ಸೋನಾಕ್ಷಿ. ಬಣ್ಣಬಣ್ಣದ ಕಲರ್‌ಫುಲ್ ಟೀ ಶರ್ಟ್ ತೊಟ್ಟು ಸೋನಾಕ್ಷಿ ಎಲ್ಲರ ಕಣ್ಣು ಸೆಳೆಯುವ ಕಾಮಾಕ್ಷಿಯಾಗಿದ್ದಾರೆ.

  'ದಬಾಂಗ್' ಚಿತ್ರದಲ್ಲಿನ ಅಭಿನಯಕ್ಕಾಗಿ ಸೋನಾಕ್ಷಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿತ್ತು. ಇನ್ನೂ ಆಕೆ 'ದಬಾಂಗ್' ಗುಂಗಿನಿಂದ ಹೊರಬಂದಂತಿಲ್ಲ. ಅಂದಹಾಗೆ ಇವು ಸಲ್ಮಾನ್ ಉಪಯೋಗಿಸಿದ ಟೀ ಶರ್ಟ್‌ಗಳಲ್ಲ, ಅವುಗಳ ಹೆಸರೇ ಸಲ್ಮಾನ್ ಟೀ ಶರ್ಟ್‌ಗಳು! ದಬಾಂಗ್ ಬಳಿಕ ಕಾಲರು, ಬಟನ್ ಇಲ್ಲದ ಈ ಟೀ ಶರ್ಟ್‌ಗಳು ಈಗ ಸಖತ್ ಫೇಮಸ್. ಟೀ ಶರ್ಟ್‌ ಏನೋ ತೊಟ್ಟಿದ್ದಾರೆ ಆದರೆ ಸಲ್ಮಾನ್ ತರಹ ಕಿತ್ತೆಸೆಯದಿದ್ದರೆ ಅಷ್ಟೇ ಸಾಕು. (ಏಜೆನ್ಸೀಸ್)

  English summary
  Actress Sonakshi Sinha has been linked to Salman Khan ever since they started shooting for their hit film Dabangg, but she is not scared of rumours. In fact, she is so indebted to the actor for giving her a big break in Bollywood that she is ready to do anything for him. She is currently going everywhere wearing Salman's Being Human T-shirts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X