ಒಂದು ಕೋಟಿ ಬಹುಮಾನ ಗೆದ್ದ ಅಮೀರ್ ಖಾನ್ ದಂಪತಿ

By Rajendra

ಅಮೀರ್ ಖಾನ್ ಹಾಗೂ ಆತನ ಪತ್ನಿ ಕಿರಣ್ ರಾವ್ ಬರೋಬ್ಬರಿ ಒಂದು ಕೋಟಿ ರುಪಾಯಿ ಬಹುಮಾನ ಗೆದ್ದಿದ್ದಾರೆ. ಆದರೆ ಇವರು ಗೆದ್ದಿರುವುದು ಲಾಟರಿ ಟಿಕೆಟ್‌ನಲ್ಲಿ ಅಲ್ಲ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಎಂಬುದು ವಿಶೇಷ. ಆದರೆ ಇದು ಅಮಿತಾಬ್ ಬಚ್ಚನ್ ನಡೆಸಿಕೊಡುವ ಹಿಂದಿ ಕಾರ್ಯಕ್ರಮವಲ್ಲ. ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಬಂಗಾಳಿಯಲ್ಲಿ ನಡೆಸಿಕೊಡುವ ಕಾರ್ಯಕ್ರಮ.

ಬಂಗಾಳಿ ಭಾಷೆಯಲ್ಲಿ ಈ ಕಾರ್ಯಕ್ರಮಕ್ಕೆ "ಕೆ ಹೋಬೆ ಬಂಗ್ಲಾರ್ ಕೋಟಿಪತಿ" ಎಂದು ಹೆಸರಿಟ್ಟಿದ್ದಾರೆ. ಸೌರವ್ ಗಂಗೂಲಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಅಮೀರ್ ಜಾಣ್ಮೆಯಿಂದ ಸರಿ ಉತ್ತರಗಳನ್ನು ನೀಡಿದ್ದಾರೆ. ಎಲ್ಲ ಲೈಫ್ ಲೈನ್‌ಗಳನ್ನು ಬಳಸಿಕೊಂಡು ತನ್ನ ಪತ್ನಿ ಕಿರಣ್ ರಾವ್ ಸಹಾಯ ಪಡೆದು ಅಮೀರ್ ಕರೋಡ್‌ಪತಿಯಾಗಿದ್ದಾರೆ.

ಆದರೆ ಈ ಸುದ್ದಿ ಬಗ್ಗೆ ಅಮೀರ್ ಖಾನ್ ತುಟಿ ಪಿಟಕ್ ಎಂದಿಲ್ಲ. ಮಹೌವಾ ಬಂಗ್ಲಾ ಟಿವಿ ವಾಹಿನಿಯ ಸಿಇಒ ಯುವರಾಜ್ ಭಟ್ಟಾಚಾರ್ಯ ಮಾತ್ರ ಸಖತ್ ಖುಷಿಯಾಗಿದ್ದು, ಅಮೀರ್ ದಂಪತಿಗಳು ತಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಶೀಘ್ರದಲ್ಲೆ ಈ ಕಾರ್ಯಕ್ರಮ ಮಹೌವಾ ಬಾಂಗ್ಲಾದಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್)

More from Filmibeat

English summary
Actor Aamir Khan with wife Kiran Rao has reportedly won rupees 1 crore on the Bengali version of Kaun Banega Crorepati, Ke Hobey Banglar Kotipati on Mahauaa Bangla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X